ಇಂಧನ ಬೆಲೆ ಆಕಾಶದತ್ತ ಸಾಗುತ್ತಿರುವ ನಡುವೆ ದೇಶದೆಲ್ಲೆಡೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಮಾಡಲು ಜನರು ಗಂಭೀರ ಚಿಂತನೆ ನಡೆಸುತ್ತಿದ್ದಾರೆ. ಕೈಗೆಟುಕುವ ಬೆಲೆಯಲ್ಲಿ, ತಂತಮ್ಮ ಜೀವನಶೈಲಿಗಳಿಗೆ ಹೊಂದುವಂಥ ಎಲೆಕ್ಟ್ರಿಕ್ ವಾಹನಗಳ ತಲಾಷೆಯಲ್ಲಿ ಮಂದಿ ಇದ್ದಾರೆ. ಕೈಗೆಟುಕುವ ಬೆಲೆಗೆ ಸಿಗುವುದರೊಂದಿಗೆ ಒಳ್ಳೆಯ ರೈಡಿಂಗ್ ಅನುಭವ ಕೊಡುವ ಎಲೆಕ್ಟ್ರಿಕ್ ಬೈಕ್‌ಗಳ ಪಟ್ಟಿ ಇಲ್ಲಿದೆ.
Nexzu Mobility Roadlark
ದೇಶೀ ಇ-ಮೊಬಿಲಿಟಿ ಬ್ರಾಂಡ್ ಆದ ನೆಕ್ಸ್‌ಜು ಮೊಬಿಲಿಟಿ ಹೊಸದೊಂದು ಇ-ಸೈಕಲ್‌ಗೆ ಚಾಲನೆ ಕೊಟ್ಟಿದ್ದು, ಇದು ಒಂದು ಚಾರ್ಜ್‌ಗೆ 100 ಕಿಮೀನಷ್ಟು ದೂರ ಕ್ರಮಿಸುತ್ತದೆ. ಕೋಲ್ಡ್ ರೋಲ್ಡ್ ಸ್ಟೀಲ್ ಫ್ರೇಂ, ಅತ್ಯುತ್ತಮ ಗುಣಮಟ್ಟದ ಬಾಡಿ, ತೆರವುಗೊಳಿಸಬಲ್ಲ ಬ್ಯಾಟರಿ ಹಾಗೂ ಅವಳಿ ಡಿಸ್ಕ್ ಬ್ರೇಕ್‌ಗಳನ್ನು ಈ ಬೈಕ್ ಹೊಂದಿದೆ.
ಪೆಡೆಲ್ ಮೋಡ್‌ನಲ್ಲಿ 100ಕಿಮೀಗಳನ್ನು ಒಂದು ಬ್ಯಾಟರಿ ಚಾರ್ಜ್ ಶಕ್ತಿಯಲ್ಲಿ ಕ್ರಮಿಸಬಲ್ಲ ರೋಡ್‌ಲಾರ್ಕ್, ಥ್ರಾಟಲ್ ಮೋಡ್‌ನಲ್ಲಿ 75 ಕಿಮೀ ಕ್ರಮಿಸಬಲ್ಲದಾಗಿದೆ. 25 ಕಿಮೀ/ಗಂಟೆ ವೇಗದಲ್ಲಿ ಈ ಬೈಕ್ ಚಲಿಸಬಲ್ಲದು. 42,000 ರೂ.ಗಳ ಬೆಲೆ ಇರುವ ಈ ಬೈಕ್ ಅನ್ನು ಗ್ರಾಹಕರು ನೇರವಾಗಿ ನೆಕ್ಸ್‌ಝು ಮೊಬಿಲಿಟಿಯ ಅಧಿಕೃತ ಜಾಲತಾಣದ ಮೂಲಕ ಖರೀದಿ ಮಾಡಬಹುದಾಗಿದೆ.
ಮದುವೆಗೆ ಬಂದವರಿಂದ ಮಾನಗೇಡಿ ಕೃತ್ಯ, ಸಾಮೂಹಿಕ ಅತ್ಯಾಚಾರದ ಬಳಿಕ ಬೆತ್ತಲೆ ನೇತು ಹಾಕಿದ ದುರುಳರು
GoZero Mobility’s Skellig Pro
ಬ್ರಿಟನ್ ಮೂಲದ ಗೋಜೀರೋ ಮೊಬಿಲಿಟಿ ಸ್ಕೆಲ್ಲಿಂಗ್ ಪ್ರೋ ಇ-ಬೈಕ್ ಒಂದು ಬ್ಯಾಟರಿ ಚಾರ್ಜ್‌ನಲ್ಲಿ 70ಕಿಮೀ ಕ್ರಮಿಸಬಲ್ಲದಾಗಿದೆ. ಈ ಬೈಕ್ ಅನ್ನು ಭಾರತದಲ್ಲೇ ಉತ್ಪಾದಿಸಲಾಗಿದೆ. ಸುಧಾರಿತ ಎನರ್ಡ್ರೈವ್ 400 ಡಬ್ಲ್ಯೂಎಚ್ ಲಿಥಿಯಮ್ ಬ್ಯಾಟರಿಯನ್ನು ಹೊಂದಿರುವ ಗೋಜೀರೋ ಸ್ಕೆಲ್ಲಿಂಗ್ ಪ್ರೋ ಬೈಕನ್ನು ಸ್ಟೀಲ್ ಫ್ರೇಂ ಬಳಸಿ ನಿರ್ಮಿಸಲಾಗಿದ್ದು, ಮುಂಬದಿ ಸಸ್ಪೆನ್ಷನ್ ಫೋರ್ಕ್ ಮತ್ತು ಬಹುಲೋಹದ ಸ್ಟೆಮ್ ಹ್ಯಾಂಡಲ್ ಒದಗಿಸಲಾಗಿದೆ.
7-ಸ್ಪೀಡ್ ಗೇರ್ ಹೊಂದಿರುವ ಗೋಜೀರೋ ಬೈಕ್‌ಗೆ ಮುಂದೆ ಹಾಗೂ ಹಿಂದೆ ಡಿಸ್ಕ್ ಬೇಕ್‌ಗಳಿವೆ. 4 ಇಂಚಿನ ಎಲ್‌ಸಿಡಿ ಡಿಸ್ಪ್ಲೇ ಜೊತೆಗೆ ಫ್ಲಾಶ್‌ಲೈಟ್ ಹಾಗೂ ಸ್ವಯಂ ಚಾಲಿತ ಲೈಟಿಂಗ್ ವ್ಯವಸ್ಥೆ ಸಹ ಈ ಬೈಕ್‌ಗೆ ಇದೆ. ಈ ಬೈಕ್ ಗರಿಷ್ಠ 25ಕಿಮೀ/ಗಂಟೆಗೆ ಚಲಿಸುವ ಕ್ಷಮತೆ ಹೊಂದಿದೆ. 0-95%ನಷ್ಟು ಬ್ಯಾಟರಿ ಚಾರ್ಜ್ ಮಾಡಲು 3 ಗಂಟೆಗಳು ಹಿಡಿಯುತ್ತವೆ.
35,000 ರೂಪಾಯಿ ಬೆಲೆಬಾಳುವ ಈ ಬೈಕ್ ಅನ್ನು ಆನ್ಲೈನ್ ಹಾಗೂ ಆಫ್ಲೈನ್ ಮೂಲಕ ಖರೀದಿಸಬಹುದಾಗಿದೆ.
ಈ ವಸ್ತು ದಾನ ಮಾಡಿದ್ರೆ ‘ಆರ್ಥಿಕ’ ಮುಗ್ಗಟ್ಟು ನಿಶ್ಚಿತ
Toutche Heileo M100
ಬೆಂಗಳೂರು ಮೂಲದ ಟೌಚೆ ತನ್ನ ಹೆಯ್ಲೋ ಎಂ100 ಎಲೆಕ್ಟ್ರಿಕ್ ಬೈಕ್ ಲಾಂಚ್ ಮಾಡಿದೆ. ಈ ಕಂಪನಿಯು ಸಾಕಷ್ಟು ಬಗೆಯ ಎಲೆಕ್ಟ್ರಿಕ್ ಬೈಕ್‌ಗಳನ್ನು ಮಾರಾಟ ಮಾಡಿದರೂ ಸಹ ಹೆಯ್ಲೋ ಇವರ ಬಳಿ ಸಿಗುವ ಕೈಗೆಟುಕುವ ಬೈಕ್ ಆಗಿದೆ.
ಒಮ್ಮೆ ಬ್ಯಾಟರಿ ಚಾರ್ಜ್ ಆದರೆ 60 ಕಿಮೀ ದೂರವನ್ನು ಈ ಬೈಕ್ ಕ್ರಮಿಸಬಲ್ಲದಾಗಿದೆ. ಈ ವ್ಯಾಪ್ತಿಯನ್ನು ಇನ್ನಷ್ಟು ವರ್ಧಿಸಬೇಕೆಂದಲ್ಲಿ ಉಚಿತವಾಗಿ ಬ್ಯಾಟರಿಯನ್ನು ಅಪ್‌ಗ್ರೇಡ್ ಮಾಡಬಹುದಾಗಿದ್ದು, ಹಾಗೆ ಮಾಡಿದಲ್ಲಿ ಒಂದು ಬ್ಯಾಟರಿ ಚಾರ್ಜ್‌ಗೆ 75 ಕಿಮೀ ದೂರ ಕ್ರಮಿಸಲಿದೆ.
ಸದ್ಯದ ಮಟ್ಟಿಗೆ ಜಿಎಸ್‌ಟಿ ಸೇರಿ ಈ ಬೈಕ್ ಅನ್ನು 50,000 ರೂಪಾಯಿಗೆ ಕಂಪನಿ ಮಾರಾಟ ಮಾಡುತ್ತಿದೆ.