ಮನೆ ಖರೀದಿ ಮಾಡುವವರಿಗೊಂದು ಖುಷಿ ಸುದ್ದಿಯಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಕಡಿಮೆ ಬೆಲೆಗೆ ಗೃಹ ಸಾಲ ನೀಡ್ತಿದೆ. ಸಂಬಳ ಪಡೆಯುವ ವರ್ಗದ ಜನರಿಗೆ ಗೃಹ ಸಾಲ ದರವನ್ನು ಶೇಕಡಾ 6.7 ಕ್ಕೆ ಇಳಿಸಿದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇತರ ಬ್ಯಾಂಕ್ ಗಳಿಗಿಂತ ಕಡಿಮೆ ಬಡ್ಡಿದರದಲ್ಲಿ ಸಾಲವನ್ನು ನೀಡುತ್ತದೆ. ಆದರೆ ಈ ಬಾರಿ ಯೂನಿಯನ್ ಬ್ಯಾಂಕ್ ಗೃಹ ಸಾಲ ಎಸ್ಬಿಐಗಿಂತ ಕಡಿಮೆಯಿದೆ. ಯೂನಿಯನ್ ಬ್ಯಾಂಕ್ ನೀಡಿದ ಮಾಹಿತಿಯ ಪ್ರಕಾರ, ಸಂಬಳ ಹೊಂದಿರುವ ಜನರು 30 ಲಕ್ಷ ರೂಪಾಯಿವರೆಗಿನ ಗೃಹ ಸಾಲಕ್ಕೆ ಕೇವಲ 6.7 ರಷ್ಟು ಬಡ್ಡಿಯನ್ನು ಮಾತ್ರ ಪಾವತಿಸಬೇಕಾಗುತ್ತದೆ.
ಇದಕ್ಕಾಗಿ ಬ್ಯಾಂಕ್ ಎರಡು ಷರತ್ತುಗಳನ್ನು ಹಾಕಿದೆ. ಮೊದಲನೆಯದು ಗ್ರಾಹಕರ ಕ್ರೆಡಿಟ್ ಸ್ಕೋರ್ ಕನಿಷ್ಠ 700 ಇರಬೇಕು. ಗೃಹ ಸಾಲ ಅರ್ಜಿದಾರರು ಮಹಿಳೆಯಾಗಿರಬೇಕು. ಗ್ರಾಹಕರು 30 ಲಕ್ಷ ರೂಪಾಯಿಗಿಂತ ಹೆಚ್ಚು ಮತ್ತು 75 ಲಕ್ಷ ರೂಪಾಯಿಗಿಂತ ಕಡಿಮೆ ಸಾಲ ಬಯಸಿದರೆ, ಅವರಿಗೆ ಬಡ್ಡಿದರವು ಶೇಕಡಾ 6.95 ಆಗಿರುತ್ತದೆ. 75 ಲಕ್ಷ ರೂಪಾಯಿಗಿಂತ ಹೆಚ್ಚಿನ ಗೃಹ ಸಾಲಗಳ ಮೇಲೆ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಆರಂಭಿಕ ಬಡ್ಡಿದರ ಶೇಕಡಾ 7 ರಷ್ಟಿರಲಿದೆ.