ನವದೆಹಲಿ: ಜೂನ್ 1 ರ ಇಂದಿನಿಂದ ನಿಮ್ಮ ದೈನಂದಿನ ಜೀವನದಲ್ಲಿ ಬದಲಾವಣೆ ತರಲಿರುವ ನಿಯಮಗಳು ಜಾರಿಗೆ ಬರಲಿವೆ.
2 ಲಕ್ಷ ರೂ. ಚೆಕ್ ಗೆ ಪಾಸಿಟಿವ್ ಪೇ:
ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ ಅನೇಕ ಚಟುವಟಿಕೆಗಳಲ್ಲಿ ಬದಲಾವಣೆಯಾಗಲಿದೆ. ಎರಡು ಲಕ್ಷ ರೂಪಾಯಿಗಿಂತ ಹೆಚ್ಚು ಮೊತ್ತದ ಚೆಕ್ ನೀಡುವಾಗ ಖಾತೆದಾರರು ಕೆಲವು ಮಾಹಿತಿಯನ್ನು ತಮ್ಮ ಬ್ಯಾಂಕುಗಳಿಗೆ ಕಡ್ಡಾಯವಾಗಿ ಸಲ್ಲಿಸಬೇಕು. ಪಾಸಿಟಿವ್ ಪೇ ಹೊಸ ಪದ್ಧತಿ ಜಾರಿಗೊಳಿಸಿದ್ದು, ಬ್ಯಾಂಕ್ ಆಫ್ ಬರೋಡಾದಲ್ಲಿ ಹೊಸ ಪದ್ಧತಿ ಇಂದಿನಿಂದ ಕಡ್ಡಾಯವಾಗಿ ಜಾರಿಗೆ ಬರಲಿದೆ.
ಆದಾಯ ತೆರಿಗೆ ವೆಬ್ ಸೈಟ್ ಬಂದ್:
ಆದಾಯ ತೆರಿಗೆ ಇಲಾಖೆಯ ಹಳೆ ವೆಬ್ಸೈಟ್ ಬಂದ್ ಆಗಲಿದ್ದು, incometax.gov.in ಹೊಸ ವೆಬ್ ಸೈಟ್ ಜೂನ್ 7 ರಿಂದ ಲಭ್ಯವಾಗಲಿದೆ.
ವಿಮಾನ ಟಿಕೆಟ್ ದರ ಹೆಚ್ಚಳ:
ಜೂನ್ 1 ರಿಂದ ದೇಶಿಯ ವಿಮಾನ ಪ್ರಯಾಣಿಕರ ಟಿಕೆಟ್ ದುಬಾರಿಯಾಗಲಿದ್ದು, ಶೇಕಡ 16 ರಷ್ಟು ಹೆಚ್ಚಳ ಮಾಡಲಾಗಿದೆ.
ಪಿಎಫ್ ಖಾತೆಗೆ ಆಧಾರ್ ಕಡ್ಡಾಯ:
ಇನ್ನು ಪಿಎಫ್ ಖಾತೆಗೆ ಆಧಾರ್ ಕಡ್ಡಾಯ ಮಾಡಲಾಗಿದ್ದು, ಜೂನ್ 1 ರಿಂದ ನಿಯಮ ಜಾರಿಗೆ ಬರಲಿದೆ.
ಸಣ್ಣ ಉಳಿತಾಯ ಬಡ್ಡಿ ದರದಲ್ಲಿ ಬದಲಾವಣೆ:
ಬ್ಯಾಂಕ್, ಇತರೆ ಹಣಕಾಸು ಸಂಸ್ಥೆಗಳಲ್ಲಿ ಉಳಿತಾಯ ಮತ್ತು ಇತರೆ ಬಡ್ಡಿ ದರಗಳಲ್ಲಿ ಬದಲಾವಣೆಯಾಗಲಿದೆ.
ಗೂಗಲ್ ಫೋಟೋಸ್
ಗೂಗಲ್ ಫೋಟೋಸ್ ನಲ್ಲಿ ಅನಿಯಮಿತ ಸಂಗ್ರಹ ಅವಕಾಶ ರದ್ದಾಗಲಿದ್ದು, 15 ಜಿಬಿ ಮಿತಿ ಹೇರಲಾಗಿದೆ. ಹೆಚ್ಚುವರಿ ಸಂಗ್ರಹಕ್ಕಾಗಿ ಹಣ ಪಾವತಿಸಬೇಕಿದೆ.