ನವದೆಹಲಿ: ಗ್ರಾಹಕರನ್ನು ಸೆಳೆಯಲು ಬಳಸುವ ಚೈನ್ ಲಿಂಕ್ ಸ್ಕೀಮ್ ನಿಷೇಧಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ನೇರ ಮಾರಾಟ ಕಂಪೆನಿಗಳ ಪಿರಮಿಡ್ ಯೋಜನೆಗೆ ಬ್ರೇಕ್ ಹಾಕಲಿದೆ. ಹಣದ ಚಲಾವಣೆ ಮತ್ತು ಶುಲ್ಕ ಸಂಗ್ರಹಕ್ಕೆ ನಿರ್ಬಂಧ ಹೇರಲಾಗುತ್ತದೆ.
ನೇರ ಮಾರಾಟ ವಲಯದ ಕಂಪನಿಗಳು ತಮ್ಮ ಏಜೆಂಟರಿಂದ ಯಾವುದೇ ನೋಂದಣಿ ಶುಲ್ಕವನ್ನು ಸಂಗ್ರಹಣೆ ಮಾಡುವಂತಿಲ್ಲ ಎಂದು ಹೇಳಲಾಗಿದೆ.
ಪ್ರತಿಯೊಂದು ನೇರ ಮಾರಾಟ ಕಂಪನಿಯು ಕೈಗಾರಿಕೆ ಇಲಾಖೆಯಲ್ಲಿ ನೋಂದಣಿ ಮಾಡಬೇಕು. ನೋಂದಣಿ ಸಂಖ್ಯೆಯನ್ನು ವೆಬ್ಸೈಟ್ ಮತ್ತು ಎಲ್ಲ ಇನ್ವಾಯ್ಸ್ ಗಳಲ್ಲಿ ನಮೂದಿಸಬೇಕು. ಕುಂದು ಕೊರತೆಯ ಸ್ವೀಕರಿಸಲು ಪ್ರತ್ಯೇಕ ಅಧಿಕಾರಿಗಳನ್ನು ನಿಯೋಜಿಸುವ ಜೊತೆಗೆ ಗ್ರಾಹಕರಿಗೆ ಸಹಾಯವಾಣಿ ಕಲ್ಪಿಸಬೇಕೆಂದು ಹೇಳಲಾಗಿದೆ.
ನೇರ ಮಾರಾಟ ಕಂಪನಿಗಳ ವ್ಯವಹಾರಕ್ಕೆ ಸಂಬಂಧಿಸಿದಂತೆ ಇದೇ ಮೊದಲ ಬಾರಿಗೆ ನಿಯಂತ್ರಣ ಕ್ರಮ ಜಾರಿಯಾಗುತ್ತಿದೆ. ಗ್ರಾಹಕ ವ್ಯವಹಾರಗಳ ಸಚಿವಾಲಯದ ವತಿಯಿಂದ ಕರಡು ಸಿದ್ಧಪಡಿಸಲಾಗಿದೆ. ಗ್ರಾಹಕರನ್ನು ಸೆಳೆಯಲು ಚೈನ್ ಲಿಂಕ್ ಅಥವಾ ರೆಫರಲ್ ಯೋಜನೆಗಳನ್ನು ಕಂಪನಿಗಳು ಹಮ್ಮಿಕೊಳ್ಳುವಂತಿಲ್ಲವೆಂದು ಹೇಳಲಾಗಿದೆ. ಮೋದಿಕೇರ್, ಹರ್ಬಲ್ ಲೈಫ್ ಸೇರಿದಂತೆ ಅನೇಕ ನೇರ ಮಾರಾಟ ಕಂಪನಿಗಳಿಗೆ ಈ ನಿಯಮ ಅನ್ವಯವಾಗಲಿವೆ.