ಶತಕ ದಾಟಿದ ಪೆಟ್ರೋಲ್ ದರ..! ವಿಭಿನ್ನ ರೀತಿಯಲ್ಲಿ ಪ್ರತಿಭಟಿಸಿದ ಗ್ರಾಹಕ 16-02-2021 11:26AM IST / No Comments / Posted In: Business, Latest News ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಭೋಪಾಲ್ನಲ್ಲಿ ಪೆಟ್ರೋಲ್ನ ದರ ಲೀಟರ್ಗೆ ನೂರು ರೂಪಾಯಿ ದಾಟಿದೆ. ಕೊರೊನಾದ ಬಳಿಕ ಆರ್ಥಿಕ ಸಂಕಷ್ಟವನ್ನ ಅನುಭವಿಸ್ತಾ ಇರುವ ಮಧ್ಯಮ ವರ್ಗದ ಕುಟುಂಬಕ್ಕೆ ಬಹುದೊಡ್ಡ ಬರೆಯಾಗಿದೆ. ಭೋಪಾಲ್ ಮಾತ್ರವಲ್ಲದೇ ಮಧ್ಯಪ್ರದೇಶದ ಇನ್ನೂ ಅನೇಕ ನಗರಗಳಲ್ಲಿ ಪೆಟ್ರೋಲ್ ದರ ನೂರು ರೂಪಾಯಿಯ ಗಡಿ ದಾಟಿದೆ. FASTag ಭಾರೀ ಕಿರಿಕಿರಿ ಬೆನ್ನಲ್ಲೇ ವಾಹನ ಸವಾರರಿಗೆ ಭರ್ಜರಿ ಗುಡ್ ನ್ಯೂಸ್ ಪೆಟ್ರೋಲ್ ದರ ಏರಿಕೆ ವಿರುದ್ಧ ವಿಭಿನ್ನವಾಗಿ ಪ್ರತಿಭಟಿಸಿದ ವ್ಯಕ್ತಿಯೊಬ್ಬ ಪೆಟ್ರೋಲ್ ಬಂಕ್ ಎದುರು ಹೆಲ್ಮೆಟ್ ಹಾಗೂ ಕ್ರಿಕೆಟ್ ಬ್ಯಾಟ್ ಹಿಡಿದು ಶತಕ ಬಾರಿಸಿದವರಂತೆ ಪೋಸ್ ನೀಡಿದ್ದಾನೆ. ಈ ವ್ಯಕ್ತಿಯನ್ನ ಯುವ ಕಾಂಗ್ರೆಸ್ ಪದಾಧಿಕಾರಿ ಎಂದು ಗುರುತಿಸಲಾಗಿದೆ. ಪೆಟ್ರೋಲ್ ದರ ಏರಿಕೆ ವಿರುದ್ಧ ಟ್ವೀಟ್ ಮಾಡಿರುವ ವ್ಯಕ್ತಿಯೊಬ್ಬರು, ಈ ಫೋಟೋವನ್ನ ಶೇರ್ ಮಾಡಿ ತುಂಬಾ ಪರಿಶ್ರಮ ಹಾಗೂ ಹೋರಾಟದ ಬಳಿಕ ಕೊನೆಗೂ ಪೆಟ್ರೋಲ್ ಶತಕ ಬಾರಿಸಿದೆ ಎಂದು ಬರೆದುಕೊಂಡಿದ್ದಾರೆ. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. After lot of hardwork and struggle finally !! Century for Petrol !#PetrolPrice pic.twitter.com/acBD5Dxriq — _anmol.sharma (@sharrma_anmol) February 14, 2021 Indian's are ready to Celebrate when Petrol price nears Rs.100 per litre 😁#PetrolPriceHike #BjpFails pic.twitter.com/uKI8GsDeLu — Glen D'Souza (@glenfdsouza) February 13, 2021