ನವದೆಹಲಿ: ಆರೋಗ್ಯ ಕಾರ್ಯಕರ್ತರ ವಿಮೆ ರದ್ದು ಮಾಡಲಾಗಿದೆ. ಕೊರೋನಾ ಸೋಂಕಿತರ ಆರೈಕೆ ಸಂದರ್ಭದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರಿಗೆ 50 ಲಕ್ಷ ರೂಪಾಯಿ ವಿಮೆ ಸೌಲಭ್ಯವನ್ನು ಕೇಂದ್ರ ಸರ್ಕಾರ ಹಿಂಪಡೆದುಕೊಂಡಿದೆ.
ಕಳೆದ ಮಾರ್ಚ್ 24 ರಂದು ಯೋಜನೆ ಅಂತ್ಯವಾಗಿದೆ. ಈ ದಿನಾಂಕಕ್ಕೆ ಮೊದಲು ಮೃತಪಟ್ಟ ಆರೋಗ್ಯ ಕಾರ್ಯಕರ್ತರ ಕುಟುಂಬಗಳು ಸೌಲಭ್ಯ ಪಡೆಯುವ ಪ್ರಕ್ರಿಯೆ ಪೂರ್ಣಗೊಳಿಸಲು ಕೇಂದ್ರದಿಂದ ಒಂದು ತಿಂಗಳು ಅವಕಾಶ ಕಲ್ಪಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು ಈ ಕುರಿತಾಗಿ ಎಲ್ಲ ರಾಜ್ಯಗಳಿಗೆ ಪತ್ರ ಬರೆದಿದ್ದಾರೆ. 2020 ರ ಮಾರ್ಚ್ 30 ರಂದು ಯೋಜನೆ ಘೋಷಣೆಯಾಗಿದ್ದು, ಇದುವರೆಗೆ 287 ಕುಟುಂಬಗಳಿಗೆ ವಿಮೆ ಹಣ ನೀಡಲಾಗಿದೆ. ಕಳೆದ ಮಾರ್ಚ್ 24 ರಂದು ಆರೋಗ್ಯ ಕಾರ್ಯಕರ್ತರ ವಿಮೆ ಸೌಲಭ್ಯ ರದ್ದು ಮಾಡಲಾಗಿದೆ ಎಂದು ಹೇಳಲಾಗಿದೆ.