ನವದೆಹಲಿ: ಕೇಂದ್ರ ಸರ್ಕಾರ ಆರ್ಥಿಕತೆ ಉತ್ತೇಜನಕ್ಕೆ ಕ್ರಮ ಕೈಗೊಂಡಿದ್ದು ಇದರ ಭಾಗವಾಗಿ ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆ(ಎಂಎಸ್ಎಂಇ) ಗಳಿಗೆ 20 ಸಾವಿರ ಕೋಟಿ ರೂಪಾಯಿಗಳ ಸಾಲ ಖಾತರಿ ಯೋಜನೆಯನ್ನು ಪ್ರಕಟಿಸಲಾಗಿದೆ.
ಆರ್ಥಿಕ ಸಂಕಷ್ಟದಲ್ಲಿರುವ ಎಂಎಸ್ಎಂಇ ಗಳಿಗೆ ಮತ್ತೊಂದು ಸೌಲಭ್ಯ ನೀಡಲಾಗಿದ್ದು, ಉಪ ಸಾಲ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯಡಿ ಮಂಜೂರಾದ ಎಲ್ಲ ಸಾಲ ಸೌಲಭ್ಯಗಳಿಗೆ ಗ್ಯಾರಂಟಿ ಲಭ್ಯತೆ ದಿನದಿಂದ ಅಥವಾ 2020 ರ ಮಾರ್ಚ್ 31 ರಿಂದ ಗರಿಷ್ಠ 10 ವರ್ಷಗಳವರೆಗೆ ಅನ್ವಯವಾಗುವಂತೆ 20 ಸಾವಿರ ಕೋಟಿ ರೂಪಾಯಿ ಅನುಮೋದಿಸಲಾಗಿದೆ.
ಎಂಎಸ್ಎಂಇ ಘಟಕದ ಪ್ರವರ್ತಕರಿಗೆ ಅವರ ಪಾಲಿನ ಶೇಕಡ 15 ರಷ್ಟು ಈಕ್ವಿಟಿ ಜೊತೆಗೆ ಸಾಲ ಅಥವಾ 75 ಲಕ್ಷ ರೂಪಾಯಿಗಳಲ್ಲಿ ಯಾವುದು ಕಡಿಮೆಯೋ ಅದಕ್ಕೆ ಸಾಲ ನೀಡಲಾಗುವುದು. ಈ ಕುರಿತಾಗಿ ಮಾರ್ಗಸೂಚಿ ಹೊರಡಿಸಲಾಗಿದ್ದು, 2020 ರ ಏಪ್ರಿಲ್ 30 ರವರೆಗೆ ಆರ್ಥಿಕ ಸಂಕಷ್ಟಕ್ಕೆ ಒಳಗಾದ ಎಂಎಸ್ಎಂಇ ಗಳಿಗೆ ಸಾಲ ಸೌಲಭ್ಯ ನೀಡಲಾಗುವುದು. ಯೋಜನೆ ಅಡಿಯಲ್ಲಿ ಯಾವುದೇ ವಿಧದ ಶೂರಿಟಿಯನ್ನು ಅನುಮೋದಿಸಲಾಗಿದೆ ಎಂದು ಹೇಳಲಾಗಿದೆ.