ನವದೆಹಲಿ: ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರ ಜಿಎಸ್ಟಿ ಪರಿಹಾರ ಮೊತ್ತವನ್ನು ಪಾವತಿಸಿದೆ.
ಹಣಕಾಸು ಇಲಾಖೆಯಿಂದ 1,65,302 ಕೋಟಿ ರೂಪಾಯಿ ಜಿಎಸ್ಟಿ ಪರಿಹಾರ ಮೊತ್ತ ಬಿಡುಗಡೆ ಮಾಡಲಾಗಿದ್ದು ಮಹಾರಾಷ್ಟ್ರಕ್ಕೆ 19,233, ಕರ್ನಾಟಕಕ್ಕೆ 18,628 ಕೋಟಿ ರೂಪಾಯಿ ನೀಡಲಾಗಿದೆ. 2019 -20 ನೇ ಸಾಲಿನ ಜಿಎಸ್ಟಿ ಪರಿಹಾರವನ್ನು ಬಿಡುಗಡೆ ಮಾಡಲಾಗಿದ್ದು, ಆಂಧ್ರಪ್ರದೇಶ 3028 ಕೋಟಿ ರೂ., ಗುಜರಾತ್ 14,801 ಕೋಟಿ ರೂ., ಕರ್ನಾಟಕ 18,628 ಕೋಟಿ ರೂ., ಪಂಜಾಬ್ 12,187 ಕೋಟಿ ರೂ., ತಮಿಳುನಾಡು 12,305 ಕೋಟಿ ರೂ., ಉತ್ತರಪ್ರದೇಶ 9,123 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ.