ಕರೊನಾ ಹಿನ್ನೆಲೆ ವಿದೇಶ ಪ್ರಯಾಣಕ್ಕೆ ಹಾಕಲಾಗಿದ್ದ ನಿರ್ಬಂಧಗಳನ್ನ ಕೊಂಚ ಸಡಿಲಿಸಿರುವ ಕೇಂದ್ರ ಗೃಹ ಇಲಾಖೆ ವಿದೇಶಗರಿಗೆ ಭಾರತಕ್ಕೆ ಬರಲು ಅನುಮತಿ ನೀಡಿದೆ. ಆದರೆ ಪ್ರವಾಸಿ ಉದ್ದೇಶದಿಂದ ಬರುವವರಿಗೆ ಮಾತ್ರ ಈಗಲೂ ನಿರ್ಬಂಧ ಮುಂದುವರಿಯಲಿದೆ.
ಗೃಹ ಇಲಾಖೆಯ ಈ ಘೋಷಣೆಯಿಂದಾಗಿ ಭಾರತೀಯ ಮೂಲದ ವ್ಯಕ್ತಿ (ಪಿಐಒ) ಹಾಗೂ ಸಾಗರೋತ್ತರ ನಾಗರಿಕ(ಒಸಿಐ) ಕಾರ್ಡ್ ಹೊಂದಿರುವವರು ಭಾರತಕ್ಕೆ ಭೇಟಿ ನೀಡಬಹುದಾಗಿದೆ.
ಭಾರತವನ್ನ ಪ್ರವೇಶಿಸಲು ಅಥವಾ ಭಾರತದಿಂದ ತೆರಳುವ ನಾಗರಿಕರಿಗೆ ಕರೊನಾದಿಂದಾಗಿ ವಿಧಿಸಲಾಗಿದ್ದ ನಿಯಮಗಳಿಗೆ ಕೇಂದ್ರ ಗೃಹ ಇಲಾಖೆ ಗುರುವಾರ ಕೊಂಚ ಸಡಿಲಿಕೆ ನೀಡಿದೆ. ಹೀಗಾಗಿ ಪ್ರವಾಸಿ ಉದ್ದೇಶವೊಂದನ್ನ ಹೊರತುಪಡಿಸಿ ಉಳಿದ ಯಾವುದೇ ಯೋಗ್ಯ ಉದ್ದೇಶಕ್ಕಾಗಿ ಪಿಐಒ ಹಾಗೂ ಒಸಿಐ ಕಾರ್ಡ್ ಹೊಂದಿರುವವರು ಭಾರತಕ್ಕೆ ಪ್ರವಾಸ ಮಾಡಬಹುದಾಗಿದೆ.