ನವದೆಹಲಿ: ಸಂಸ್ಕರಿಸಿದ ಸೋಯಾಬಿನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಮೂಲ ಆಮದು ಸಂಕವನ್ನು ಕೇಂದ್ರ ಸರ್ಕಾರ ಶೇಕಡ 5 ರಷ್ಟು ಕಡಿತಗೊಳಿಸಿದೆ.
ಇದರಿಂದಾಗಿ ಖಾದ್ಯ ತೈಲಗಳ ಬೆಲೆ ಇಳಿಕೆಯಾಗಲಿದ್ದು, ಗ್ರಾಹಕರಿಗೆ ಅನುಕೂಲವಾಗಲಿದೆ. ಗುರುವಾರದಿಂದಲೇ ಜಾರಿಗೆ ಬರುವಂತೆ ಸಂಸ್ಕರಿಸಿದ ಸೋಯಾಬಿನ್ ಎಣ್ಣೆ ಮತ್ತು ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇಕಡ 5ರಷ್ಟು ಕಡಿತಗೊಳಿಸಲಾಗಿದೆ.
ಶೇಕಡ 17.5 ರಿಂದ ಶೇಕಡ 12.5ಕ್ಕೆ ಆಮದು ಸುಂಕ ಕಡಿತಗೊಂಡಿದ್ದು, ಈ ಕ್ರಮದಿಂದ ದೇಶಿಯ ಮಾರುಕಟ್ಟೆಯಲ್ಲಿ ಖಾದ್ಯ ತೈಲಗಳ ಬೆಲೆ ಕಡಿಮೆಯಾಗಲಿದೆ. ಖಾದ್ಯ ತೈಲಗಳ ಬೆಲೆ ಇಳಿಕೆಗೆ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಮುಂದುವರೆದ ಭಾಗ ಇದಾಗಿದೆ. ದೇಶಿಯ ಮಾರುಕಟ್ಟೆಯಲ್ಲಿ ಸೋಯಾಬಿನ್ ಮತ್ತು ಸೂರ್ಯಕಾಂತಿ ಚಿಲ್ಲರೆ ಮಾರಾಟ ದರ ಕಡಿಮೆಯಾಗಲಿದೆ ಎಂದು ಹೇಳಲಾಗಿದೆ.
2021ರ ಅಕ್ಟೋಬರ್ ನಲ್ಲಿ ಸಂಸ್ಕರಿಸಿದ ಸೂರ್ಯಕಾಂತಿ ಎಣ್ಣೆ ಮತ್ತು ಸಂಸ್ಕರಿಸಿದ ಸೋಯಾಬೀನ್ ಎಣ್ಣೆ ಮೇಲಿನ ಆಮದು ಸುಂಕವನ್ನು ಶೇಕಡ 32.5 ರಿಂದ ಶೇಕಡ 17.5ಕ್ಕೆ ಇಳಿಕೆ ಮಾಡಲಾಗಿತ್ತು. ಈಗ ಮತ್ತೆ ಶೇ. 5 ರಷ್ಟು ಕಡಿತಗೊಳಿಸಿದ್ದು, ಶೇ. 12.5 ಕ್ಕೆ ಇಳಿಕೆಯಾಗಿದೆ.