ಮುಂಬೈ: ಎಂಎಸ್ಎಂಇ ಉತ್ಪನ್ನಗಳಿಗೆ ಇ ಪೋರ್ಟಲ್ ಮಳಿಗೆ ಕಲ್ಪಿಸುವುದಾಗಿ ಕೇಂದ್ರ ಸಚಿವ ನಿತಿನ್ ಗಡ್ಕರಿ ತಿಳಿಸಿದ್ದಾರೆ.
ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ(ಎಂಎಸ್ಎಂಇ) ಉತ್ಪನ್ನಗಳನ್ನು ಮಾರಾಟ ಮಾಡಲು ಅನುಕೂಲವಾಗುವಂತೆ ಅಮೆಜಾನ್ ರೀತಿಯಲ್ಲಿ ಎಸ್.ಬಿ.ಐ. ಜೊತೆಗೆ ಇ- ಪೋರ್ಟಲ್ ಆರಂಭಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರಸ್ತುತ 80 ಸಾವಿರ ಕೋಟಿ ರೂಪಾಯಿ ಇರುವ ಗ್ರಾಮೀಣ ಕೈಗಾರಿಕೆಗಳ ವಹಿವಾಟಿನ ಮೊತ್ತವನ್ನು ಮುಂದಿನ ಎರಡು ವರ್ಷದಲ್ಲಿ 5 ಲಕ್ಷ ಕೋಟಿ ರೂಪಾಯಿಗೆ ಹೆಚ್ಚಳಮಾಡುವ ಯೋಜನೆ ರೂಪಿಸಲಾಗಿದೆ ಎಂದು ಗಡ್ಕರಿ ಹೇಳಿದ್ದಾರೆ.