ನವದೆಹಲಿ: ವಾಹನಗಳ ನೋಂದಣಿ ಪ್ರಮಾಣ ಪತ್ರ ನವೀಕರಣ ಶುಲ್ಕ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಬಗ್ಗೆ ಕೇಂದ್ರ ರಸ್ತೆ, ಸಾರಿಗೆ ಹೆದ್ದಾರಿ ಸಚಿವಾಲಯದಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿದ ಬಗ್ಗೆ ಪ್ರಮಾಣಪತ್ರ ನೀಡಿದರೆ ಹೊಸ ವಾಹನದ ನೋಂದಣಿ ಶುಲ್ಕ ಮನ್ನಾ ಆಗಲಿದೆ.
ಪ್ರಸ್ತಾವನೆ ಅನ್ವಯ ದ್ವಿಚಕ್ರ ವಾಹನಗಳ ನವೀಕರಣ ಶುಲ್ಕ 1000 ರೂ., ದ್ವಿಚಕ್ರವಾಹನಕ್ಕೆ 2500 ರೂ., ಲಘು ವಾಹನಗಳಿಗೆ 5000 ರೂ. ನಿಗದಿ ಮಾಡುವ ಸಾಧ್ಯತೆ ಇದೆ. ವಾಹನ ನವೀಕರಣ ವಿಳಂಬವಾದರೆ ಶುಲ್ಕ 500 ರೂ.ಗೆ ಏರಿಕೆ ಮಾಡಲಾಗುವುದು ಎನ್ನಲಾಗಿದೆ.