
ನವದೆಹಲಿ: ಕೊರೋನಾ ಲಸಿಕೆ ಮೇಲಿನ ಸರಕು ಮತ್ತು ಸೇವಾ ತೆರಿಗೆ(GST)ಯನ್ನು ಮನ್ನಾ ಮಾಡುವ ಸಾಧ್ಯತೆ ಇದೆ.
ಈಗಾಗಲೇ ಕಸ್ಟಮ್ಸ್ ಸುಂಕವನ್ನು ಕೇಂದ್ರ ಸರ್ಕಾರ ಮನ್ನಾ ಮಾಡಿದೆ. ಭಾರತದಲ್ಲಿ ಕೊರೋನಾ ಲಸಿಕೆಯ ಮೇಲೆ ಶೇಕಡ 5 ರಷ್ಟು ಜಿಎಸ್ಟಿ ಇದೆ. ಜಿಎಸ್ಟಿ ಮನ್ನಾ ಮಾಡಿದರೆ ಲಸಿಕೆ ಕಡಿಮೆ ಬೆಲೆಗೆ ಲಭ್ಯವಾಗಲಿದೆ. ರಾಜ್ಯ ಸರ್ಕಾರ ಮತ್ತು ಜನತೆಗೆ ಕಡಿಮೆ ಬೆಲೆಗೆ ಲಸಿಕೆ ಲಭ್ಯವಾಗಲಿದೆ. ಪ್ರತಿ ಡೋಸ್ ಲಸಿಕೆಯ ಬೆಲೆ 30 ರೂಪಾಯಿಯಷ್ಟು ಇಳಿಕೆಯಾಗುವ ಸಾಧ್ಯತೆ ಇದೆ.