ಮೌಲ್ಯೀಕರಣ ಮಾನದಂಡಗಳ ಬದಲಾವಣೆ ಹಾಗೂ ಸಿಬಿಯ ಎಟಿ1 ಬಾಂಡ್‌ಗಳ ಕಾರಣದಿಂದ ಹಾಗೂ ತಮ್ಮೆಲ್ಲಾ ಗ್ರಾಹಕರಿಗೆ ಬಡ್ಡಿದರದ ರಿಯಾಯಿತಿ ಹೊಣೆಗಾರಿಕೆಯನ್ನು ನಿಭಾಯಿಸಲು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ ಬಂಡವಾಳದ ಕೊರತೆ ಎದುರಾದ ಕಾರಣ ಆರ್ಥಿಕ ಮರುಪೂರಣ ಒದಗಿಸುವ ತನ್ನ ನೀಲನಕ್ಷೆಗೆ ಕೇಂದ್ರ ಸರ್ಕಾರ ಮಾರ್ಪಾಡು ಮಾಡುವ ಸಾಧ್ಯತೆ ಇದೆ.
ಸಾಂಕ್ರಮಿಕ ಕಾಲಘಟ್ಟದಲ್ಲಿ ಅನುತ್ಪಾದಕ ಆಸ್ತಿಯಲ್ಲಿ ಹೆಚ್ಚಳವಾದ ಕಾರಣ ಬ್ಯಾಂಕುಗಳಿಗೆ ತಮ್ಮ ಹೊಣೆಗಾರಿಕೆ ನಿಭಾಯಿಸಲು ಆಗುತ್ತಿರುವ ಹೆಚ್ಚುವರಿ ಬಂಡವಾಳದ ಅಗತ್ಯ ಎಷ್ಟಿದೆ ಎಂದು ಅರಿಯಲು ವಿತ್ತ ಸಚಿವಾಲಯ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ. ಈ ನಿಟ್ಟಿನಲ್ಲಿ ಬ್ಯಾಂಕುಗಳಿಂದ ಬರುವ ವರದಿಗಳನ್ನು ಆಧರಿಸಿ ಆಯವ್ಯಯ ಸಂಪನ್ಮೂಲಗಳಿಂದ ಹೆಚ್ಚುವರಿ ಬಂಡವಾಳವನ್ನು ಕೇಂದ್ರ ಸರ್ಕಾರ ಕೊಡುವ ಸಾಧ್ಯತೆ ಇದೆ.
ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳಿಗೆ ಆರ್ಥಿಕ ಮರುಪೂರಣ ಕೊಡಲೆಂದು ಈ ಬಾರಿಯ ಬಜೆಟ್‌ನಲ್ಲಿ 20,000 ಕೋಟಿ ರೂ.ಗಳನ್ನು ಕೊಡಮಾಡಲಾಗಿದೆ. ಕಳೆದ ವರ್ಷ ಇದೇ ಪ್ಲಾನ್‌ಗೆಂದು ಎತ್ತಿಡಲಾಗಿದ್ದ ಒಂದಷ್ಟು ಹಣ ಬಾಕಿ ಇದ್ದು, ಈ ಬಾರಿ ಅದನ್ನು ಬಳಸಿಕೊಳ್ಳಬಹುದಾಗಿದೆ.
ಹೊಸದಾಗಿ ಖರೀದಿಸಿದ ಜಾಕೆಟ್ ಜೇಬಿನಲ್ಲಿ ಹಲ್ಲಿನ ಸೆಟ್ ಕಂಡು ಶಾಕ್ ಆದ ಮಹಿಳೆ
ಎರಡು ಕೋಟಿ ರೂ.ಗಿಂತ ಹೆಚ್ಚಿನ ವ್ಯವಹಾರದ ಗ್ರಾಹಕರ ಮೇಲೆ ವಿಧಿಸಲಾಗುವ ಬಡ್ಡಿಯ ಮೇಲಿನ ಬಡ್ಡಿಯನ್ನು ಮನ್ನಾ ಮಾಡುವ ತಮ್ಮ ಹೊಣೆಗಾರಿಕೆಗೆ ಬದ್ಧರಾಗಿರಲು ಆರ್‌ಬಿಐ ದೇಶದ ಎಲ್ಲಾ ಬ್ಯಾಂಕುಗಳಿಗೂ ಸೂಚಿಸುತ್ತಿರುವ ಕಾರಣ, ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಮೇಲೆ 7500 ಕೋಟಿ ರೂ.ಗಳಷ್ಟು ಹೆಚ್ಚುವರಿ ಆರ್ಥಿಕ ಹೊರೆ ಬಿದ್ದಂತಾಗಿದೆ.
ಕೇಂದ್ರ ಸರ್ಕಾರವು ಬ್ಯಾಂಕುಗಳ ವಿಲೀನ ಪ್ರಕ್ರಿಯೆಗೆ ದೊಡ್ಡ ಮಟ್ಟದಲ್ಲಿ ಕೈಹಾಕಿದ್ದು, 2017ರಿಂದ ಏಳು ದೊಡ್ಡ ಹಾಗೂ ಐದು ಸಣ್ಣ ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳು ಹುಟ್ಟಿಕೊಂಡಿವೆ. ಈ ಕ್ರಮಗಳಿಂದ ಬಂಡವಾಳ ಸಂಪನ್ಮೂಲಗಳನ್ನು ಇನ್ನಷ್ಟು ನ್ಯಾಯಯುತವಾಗಿ ಮಾಡುವ ಉದ್ದೇಶವನ್ನು ಸರ್ಕಾರ ಹೊಂದಿತ್ತು. ಆದರೆ ಕೋವಿಡ್ ಸಾಂಕ್ರಮಿಕ ಹಾಗೂ ಹೊಸ ಬ್ಯಾಂಕಿಂಗ್ ನೀತಿಗಳಿಂದಾಗಿ ಕ್ಷೇತ್ರದ ಮೇಲೆ ಹೆಚ್ಚುವರಿ ಒತ್ತಡ ಬಿದ್ದಿದೆ.