ನವದೆಹಲಿ: ಸ್ವಸಹಾಯ ಸಂಘದ ಮಹಿಳೆಯರಿಗೆ ನೆರವು ನೀಡಲು ಕೇಂದ್ರ ಸರ್ಕಾರ ಮುಂದಾಗಿದೆ. ವಾರ್ಷಿಕ 1 ಲಕ್ಷ ರೂಪಾಯಿ ಗಳಿಸಲು ಸಾಧ್ಯವಾಗುವಂತಹ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ.
ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾಲಯದಿಂದ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಮಹಿಳಾ ಸ್ವಸಹಾಯ ಗುಂಪುಗಳ ವಿವಿಧ ಮಾದರಿಗಳ ಕಾರ್ಯನಿರ್ವಹಣೆ ಕುರಿತು ನಡೆಸಿದ ಅಧ್ಯಯನ ಆಧರಿಸಿ ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ರಾಜ್ಯಗಳಿಗೆ ಸಲಹೆ ಸೂಚನೆ ನೀಡಲಾಗಿದೆ.
ಸುಮಾರು 2.5 ಕೋಟಿ ಮಹಿಳೆಯರಿಗೆ 2 ವರ್ಷಗಳ ಅವಧಿಗೆ ಈ ಕಾರ್ಯಕ್ರಮದಡಿ ನೆರವು ನೀಡಲಾಗುವುದು. ವಾರ್ಷಿಕ 1 ಲಕ್ಷ ರೂಪಾಯಿ ಗಳಿಸಲು ಸಾಧ್ಯವಾಗುವಂತೆ ನೆರವು ನೀಡಲಾಗುತ್ತದೆ. 70 ಲಕ್ಷ ಸ್ವಸಹಾಯ ಗುಂಪುಗಳನ್ನು ಸ್ಥಾಪಿಸಲಾಗಿದ್ದು, 7.7 ಮಹಿಳೆಯರು ಸದಸ್ಯರಾಗಿದ್ದಾರೆ. ಸ್ವಸಹಾಯ ಗುಂಪುಗಳಿಗೆ ವಾರ್ಷಿಕ 80 ಸಾವಿರ ಕೋಟಿ ರೂಪಾಯಿ ಅನುದಾನ ಒದಗಿಸಲಾಗುವುದು ಎಂದು ಹೇಳಲಾಗಿದೆ.