ನವದೆಹಲಿ: ಇನ್ನು ಮುಂದೆ ವಾಹನಗಳಿಗೂ ನಾಮಿನಿ ಮಾಡಬಹುದಾಗಿದ್ದು, ಮಾಲೀಕರ ವರ್ಗಾವಣೆ ಸುಲಭವಾಗಲಿದೆ. ಕೇಂದ್ರ ಮೋಟಾರು ವಾಹನ ನಿಯಮ 1989 ಕ್ಕೆ ತಿದ್ದುಪಡಿ ತರಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಪ್ರಸ್ತಾವನೆ ಸಿದ್ಧಪಡಿಸಿದೆ.
ವಾಹನ ನೋಂದಣಿ ಪತ್ರ ಆರ್.ಸಿ.ಯಲ್ಲಿ ನಾಮಿನಿಯನ್ನು ಹೆಸರಿಸುವ ಆಯ್ಕೆಯನ್ನು ನೀಡಲಾಗುವುದು. ವಾಹನ ನೋಂದಣಿ ಮಾಡಿಸುವ ಸಮಯದಲ್ಲೇ ನಾಮಿನಿಯನ್ನು ಹೆಸರಿಸಬಹುದಾಗಿದೆ. ಇದರೊಂದಿಗೆ ಆನ್ಲೈನ್ ಮೂಲಕ ನಾಮಿನಿ ಹೆಸರನ್ನು ಸೇರಿಸಲು ಅವಕಾಶ ಕಲ್ಪಿಸಲಾಗುವುದು.
ವಾಹನ ಮಾಲೀಕರು ಮೃತಪಟ್ಟ ಸಂದರ್ಭದಲ್ಲಿ ನಾಮಿನಿಯ ಹೆಸರಿಗೆ ವಾಹನ ವರ್ಗಾವಣೆ ಮಾಡಿಸಲು ಸುಲಭವಾಗಲಿದೆ. ಪ್ರಸ್ತುತ ವಾಹನ ಮಾಲೀಕತ್ವ ಪ್ರಕ್ರಿಯೆ ಸರಳವಾಗಿಲ್ಲ. ಹಾಗಾಗಿ ಸಾರಿಗೆ ಇಲಾಖೆ ಕಚೇರಿಗಳಿಗೆ ಅಲೆದಾಡುವಂತಾಗಿದೆ. ಇದನ್ನು ತಪ್ಪಿಸಲು ನಾಮಿನಿ ಗುರುತುಪತ್ರ ತೋರಿಸಿ ಸುಲಭವಾಗಿ ತಮ್ಮ ಹೆಸರಿಗೆ ವಾಹನವನ್ನು ಬದಲಾಯಿಸಿಕೊಳ್ಳಲು ಅನುಕೂಲವಾಗುವಂತೆ ಕೇಂದ್ರ ಮೋಟಾರು ವಾಹನ ನಿಯಮಕ್ಕೆ ತಿದ್ದುಪಡಿ ತರಲಾಗುವುದು ಎಂದು ಹೇಳಲಾಗಿದೆ.