ಕೇಂದ್ರ ಸರ್ಕಾರದ ನೌಕರರಿಗೆ ನಿವೃತ್ತಿ ಸಮಯದಲ್ಲಿ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳುವ ಸಲುವಾಗಿ ಪಿಂಚಣಿದಾರ ಕಲ್ಯಾಣ ಇಲಾಖೆ ಕೇಂದ್ರ ನೌಕರರ ನಿವೃತ್ತಿ ದಿನದಂದೇ ಎಲ್ಲಾ ಸೌಲಭ್ಯಗಳನ್ನ ನೀಡುವ ಸಲುವಾಗಿ ವಿವಿಧ ಕ್ರಮಗಳನ್ನ ಕೈಗೊಂಡಿದೆ.
ಈಗಾಗಲೇ ನಿವೃತ್ತಿ ಹೊಂದಿರುವ ಅನೇಕರಿಗೆ ಇನ್ನೂ ನಿವೃತ್ತಿ ಸೌಲಭ್ಯಗಳು ದೊರಕಿಲ್ಲ. ಈ ವಿಳಂಬ ನೀತಿಯಿಂದಾಗಿ ನಿವೃತ್ತ ನೌಕರರಿಗೆ ತೊಂದರೆಯಾಗಬಾರದು ಅಂತಾ ಕೇಂದ್ರ ಸಚಿವಾಲಯ ನೌಕರರ ಪಿಂಚಣಿ ಪ್ರಗತಿಯನ್ನ ಮೇಲ್ವಿಚಾರಣೆ ಮಾಡಲು ನಿರ್ಧರಿಸಿದೆ.
ಈ ಮೇಲ್ವಿಚಾರಣೆ ಬಳಿಕ ಕೇಂದ್ರ ಸರ್ಕಾರ ನೌಕರರಿಗೆ ಸಿಹಿ ಸುದ್ದಿಯನ್ನ ನೀಡಿದ್ದು, ನೌಕರ ನಿವೃತ್ತಿ ಹೊಂದಿದ ದಿನದಂದೇ ಪಿಂಚಣಿ ಸೌಲಭ್ಯ ನೀಡಲು ನಿರ್ಧರಿಸಿದೆ ಎಂದು ಹೇಳಲಾಗಿದೆ.
ಅಲ್ಲದೇ ಈ ಸಂಬಂಧ ಪಿಂಚಣಿದಾರ ಕಲ್ಯಾಣ ಇಲಾಖೆಗೂ ಕೇಂದ್ರ ಸರ್ಕಾರ ವಾರ್ನಿಂಗ್ ನೀಡಿದ್ದು ಯಾವುದೇ ಕಾರಣಕ್ಕೂ ಪಿಂಚಣಿಯಲ್ಲಿ ವಿಳಂಬ ಮಾಡುವಂತಿಲ್ಲ ಎಂದು ಹೇಳಿದೆ.
ಪಿಂಚಣಿ ನಿಯಮ 1972ರ ಅಡಿಯಲ್ಲಿ ಕೇಂದ್ರ ಸರ್ಕಾರ ಇಲಾಖೆಗೆ ಟೈಮ್ಲೈನ್ ನೀಡಿದ್ದು, ಇದರ ಅನ್ವಯ ಕೇಂದ್ರ ಸರ್ಕಾರಿ ನೌಕರರು ನಿವೃತ್ತಿಯಾಗುವ ಒಂದು ವರ್ಷದ ಮುಂಚಿತವಾಗಿಯೇ ಆತನಿಗೆ ಪಿಂಚಣಿ ನೀಡಲು ಬೇಕಾದ ಎಲ್ಲಾ ಸಿದ್ಧತೆಗಳನ್ನ ಮಾಡಿಕೊಂಡಿರಬೇಕು ಎಂದು ಹೇಳಿದೆ.