alex Certify ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್…! ಶೀಘ್ರದಲ್ಲೇ ಸಿಗಲಿದೆ ಡಿಎ ಕುರಿತ ಗುಡ್‌ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಂದ್ರ ಸರ್ಕಾರಿ ನೌಕರರಿಗೆ ಬಂಪರ್…! ಶೀಘ್ರದಲ್ಲೇ ಸಿಗಲಿದೆ ಡಿಎ ಕುರಿತ ಗುಡ್‌ ನ್ಯೂಸ್

ಕೇಂದ್ರ ಸರ್ಕಾರಿ ನೌಕರರಿಗೆ ಈ ತಿಂಗಳು ಖುಷಿ ಸುದ್ದಿ ಸಿಗುವ ಸಾಧ್ಯತೆಯಿದೆ. ಕೇಂದ್ರದ 50 ಲಕ್ಷ ಉದ್ಯೋಗಿಗಳು ಮತ್ತು 61 ಲಕ್ಷ ಪಿಂಚಣಿದಾರರಿಗೆ ಸರ್ಕಾರ ಉಡುಗೊರೆ ನೀಡಲಿದೆ. ಕೇಂದ್ರ ಉದ್ಯೋಗಿಗಳಿಗೆ ಪ್ರಿಯ ಭತ್ಯೆ ಈ ತಿಂಗಳು ಘೋಷಣೆಯಾಗಲಿದೆ. ಡಿಎ ಬಗ್ಗೆ ದೀರ್ಘ ಸಮಯದಿಂದ ಚರ್ಚೆಯಾಗ್ತಿದೆ.

ಕೇಂದ್ರ ಸರ್ಕಾರ ಈ ತಿಂಗಳಲ್ಲಿ ಶೇಕಡಾ 4 ರಷ್ಟು ಡಿಎ ಹೆಚ್ಚಳವನ್ನು ಘೋಷಿಸಬಹುದು ಎನ್ನಲಾಗಿದೆ. ಇದು ಕೇಂದ್ರ ನೌಕರರ ವೇತನದ ಮೇಲೆ ನೇರ ಪರಿಣಾಮ ಬೀರಲಿದೆ. ಕಾರ್ಮಿಕ ಇಲಾಖೆ ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕವನ್ನು ಘೋಷಿಸಿದೆ. ಇದು ಕೇಂದ್ರೀಯ ಉದ್ಯೋಗಿಗಳಲ್ಲಿ ಡಿಎ ಹೆಚ್ಚಳದ ಭರವಸೆ ಮೂಡಿಸಿದೆ. ಪ್ರಿಯ ಭತ್ಯೆಯ ದರವನ್ನು ಎಐಸಿಪಿಐ ಮಾತ್ರ ನಿರ್ಧರಿಸುತ್ತದೆ.

ಸರ್ಕಾರ ಪ್ರಿಯ ಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಬಹುದು ಎಂದು ಹೇಳಲಾಗುತ್ತಿದೆ. ಏಳನೇ ವೇತನ ಆಯೋಗದ ಪ್ರಕಾರ, ಕೇಂದ್ರ ಉದ್ಯೋಗಿಗಳಿಗೆ ಪ್ರಿಯ ಭತ್ಯೆಯಲ್ಲಿ ಶೇಕಡಾ 4 ರಷ್ಟು  ಹೆಚ್ಚಳವಾದ್ರೆ, ಅವರ ಪ್ರಯಾಣ ಭತ್ಯೆ ಕೂಡ ಶೇಕಡಾ 4ರಷ್ಟು  ಹೆಚ್ಚಾಗುತ್ತದೆ. ಜುಲೈ 1,2020 ರಿಂದ ಜನವರಿ 1,2021 ರವರೆಗೆ ಕೇಂದ್ರ ನೌಕರರಿಗೆ ಡಿಎ ನೀಡಲಾಗಿಲ್ಲ. ಕೊರೊನಾ ಬಿಕ್ಕಟ್ಟಿನಿಂದಾಗಿ 2020 ರ ಏಪ್ರಿಲ್‌ನಲ್ಲಿ ಕೇಂದ್ರ ಪ್ರಿಯ ಭತ್ಯೆಯನ್ನು ರದ್ದು ಮಾಡಿತ್ತು. ಕೇಂದ್ರದ ಪ್ರಕಟಣೆಯ ಪ್ರಕಾರ, ಜೂನ್ 2021 ರವರೆಗೆ ಕೇಂದ್ರ ಉದ್ಯೋಗಿಗಳಿಗೆ ಪ್ರಿಯ ಭತ್ಯೆ ದೊರೆಯುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...