ನವದೆಹಲಿ: ತೆರಿಗೆದಾರರಿಗೆ ಅನುಕೂಲ ಕಲ್ಪಿಸಲು ಕೇಂದ್ರ ಸರ್ಕಾರ ಕ್ರಮಕೈಗೊಂಡಿದ್ದು, ಎಸ್ಎಂಎಸ್ ಮೂಲಕ ಜಿ.ಎಸ್.ಟಿ. ರಿಟರ್ನ್ ಸಲ್ಲಿಸಲು ಅವಕಾಶ ನೀಡಲಾಗಿದೆ.
ಸರಕು ಮತ್ತು ಸೇವಾ ತೆರಿಗೆ ರಿಟರ್ನ್ ಸಲ್ಲಿಕೆದಾರರು ತಮ್ಮ ತೆರಿಗೆ ಮೊತ್ತ ಶೂನ್ಯವಾಗಿದ್ದ ಎಸ್ಎಂಎಸ್ ಮೂಲಕವೇ ರಿಟರ್ನ್ ಸಲ್ಲಿಕೆ ಮಾಡಲು ಕೇಂದ್ರ ಸರ್ಕಾರ ಅವಕಾಶ ನೀಡಿದೆ. ಜಿಎಸ್ಟಿ ಅಡಿ ನೋಂದಾಯಿಸಿಕೊಂಡವರು ಪ್ರತಿ ತಿಂಗಳು ಮಾಹಿತಿ ನೀಡಬೇಕಿದೆ.
ಶೂನ್ಯ ತೆರಿಗೆ ಮೊತ್ತ ಹೊಂದಿದವರು ನೊಂದಾಯಿತ ಮೊಬೈಲ್ ಸಂಖ್ಯೆಯ ಮೂಲಕ ಎಸ್ಎಂಎಸ್ ಸಂದೇಶ ಕಳುಹಿಸಬಹುದು. ಇದನ್ನು ಒಟಿಪಿ ಮೂಲಕ ದೃಢೀಕರಿಸಲಾಗುವುದು. ಶೂನ್ಯ ಜಿಎಸ್ಟಿ ರಿಟರ್ನ್ ಅನ್ನು ಜಿಎಸ್ಟಿಆರ್ ಫಾರ್ಮ್ ಬಿ ಮೂಲಕ ಎಸ್ಎಂಎಸ್ ಕಳುಹಿಸಿ ಸಲ್ಲಿಸಲು ಅವಕಾಶ ನೀಡಲಾಗಿದ್ದು ಇದರಿಂದ ಸುಮಾರು 22 ಲಕ್ಷ ತೆರಿಗೆದಾರರಿಗೆ ಅನುಕೂಲವಾಗಲಿದೆ.