ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸುತ್ತಿದ್ದಾರೆ. ಹಣಕಾಸು ಸಚಿವೆಯಾದ ಬಳಿಕ ನಿರ್ಮಲಾ ಸೀತಾರಾಮನ್ ಮಂಡಿಸುತ್ತಿರುವ ಮೂರನೇ ಬಜೆಟ್ ಇದಾಗಿದೆ.
ಬಜೆಟ್ ಕುರಿತು ಒಂದಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ. ಹಾಲಿ ಹಣಕಾಸು ಸಚಿವರಾಗಿರುವ ನಿರ್ಮಲಾ ಸೀತಾರಾಮನ್ ಇಂದಿರಾಗಾಂಧಿಯವರ ಬಳಿಕ ಬಜೆಟ್ ಮಂಡನೆ ಮಾಡಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಇದರ ಜೊತೆಗೆ ಮತ್ತಷ್ಟು ಇಂಟರೆಸ್ಟಿಂಗ್ ಮಾಹಿತಿ ಅಂದ್ರೆ ಬಜೆಟ್ಟನ್ನು ಅತಿ ಹೆಚ್ಚು ಬಾರಿ ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರಿಗೆ ಸಂದಿದ್ದು, ಒಟ್ಟು ಹತ್ತು ಬಾರಿ ಅವರು ಬಜೆಟ್ ಮಂಡಿಸಿದ್ದರು.
‘ಆದಾಯ ತೆರಿಗೆ’ ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು…? ಇಲ್ಲಿದೆ ಬಹು ಮುಖ್ಯ ಮಾಹಿತಿ
ಮತ್ತೊಂದು ಮುಖ್ಯ ಸಂಗತಿಯೆಂದರೆ ಮೊರಾರ್ಜಿ ದೇಸಾಯಿ ತಮ್ಮ ಹುಟ್ಟುಹಬ್ಬದ ದಿನವಾದ ಫೆಬ್ರವರಿ 29 ರಂದೇ ಎರಡು ಬಾರಿ ಬಜೆಟ್ ಮಂಡಿಸಿದ್ದರು (ಫೆಬ್ರವರಿ 29, 1964 ಹಾಗೂ ಫೆಬ್ರವರಿ 29, 1968).
ಅಲ್ಲದೇ 92 ವರ್ಷಗಳ ಕಾಲ ರೈಲ್ವೆ ಬಜೆಟ್ ಅನ್ನು ಪ್ರತ್ಯೇಕವಾಗಿ ಮಂಡಿಸುತ್ತಿದ್ದು, 2017 ರಿಂದ ಸಾಮಾನ್ಯ ಬಜೆಟ್ ಜೊತೆಗೆ ರೈಲ್ವೆ ಬಜೆಟ್ ಕೂಡಾ ಮಂಡನೆ ಮಾಡಲಾಗುತ್ತಿದೆ.