![Central bank will not extend loan moratorium beyond Monday - business news - Hindustan Times](https://m.hindustantimes.com/rf/image_size_1200x900/HT/p2/2020/08/29/Pictures/outside-photo-headquarters-reserve-mumbai-pictured-india_289b8714-e97f-11ea-98f7-bd84aa0e920b.jpg)
ಕೊರೊನಾ ಸಾಂಕ್ರಾಮಿಕ ರೋಗ ನಿಯಂತ್ರಣಕ್ಕೆ ಜಾರಿಗೆ ತಂದ ಲಾಕ್ ಡೌನ್ ನಿಂದಾಗಿ ಸಾಲ ಮರುಪಾವತಿ ಕಷ್ಟವೆಂಬ ಕಾರಣಕ್ಕೆ ಇಎಂಐ ವಿನಾಯಿತಿ ನೀಡಲಾಗಿದ್ದು, ಸೆಪ್ಟೆಂಬರ್‌ನಿಂದ ಇದು ಜಾರಿಯಲ್ಲಿರುವುದಿಲ್ಲ.
ಕೇಂದ್ರ ಸರಕಾರ ಇಎಂಐ ವಿನಾಯಿತಿ ವಿಸ್ತರಣೆ ಮಾಡಲು ಸಿದ್ಧವಿದ್ದರೂ, ಆರ್‌ಬಿಐ ಇದಕ್ಕೆ ಒಪ್ಪುತ್ತಿಲ್ಲ. ಈ ಬಗ್ಗೆ ಮಾತನಾಡಿರುವ ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಸಾಲ ಪಾವತಿ ಮುಂದೂಡುವುದು ತಾತ್ಕಾಲಿಕ ಪರಿಹಾರ. ಇದರಿಂದ ಬ್ಯಾಂಕ್ ಗಳಿಗೆ ಭಾರಿ ಸಮಸ್ಯೆಯಾಗಲಿದೆ. ಇದರೊಂದಿಗೆ ಸಾಲ ಮರುಪಾವತಿದಾರರಿಗೂ ಪರಿಹಾರ ಸಿಗುವುದಿಲ್ಲ. ಆದ್ದರಿಂದ ಸೆಪ್ಟೆಂಬರ್1ರಿಂದ ಸಾಲ ಮರುಪಾವತಿ ವಿನಾಯಿತಿಯನ್ನು ಮುಂದುವರಿಸುವುದಿಲ್ಲ ಎಂದಿದ್ದಾರೆ.
ಕೇಂದ್ರ ಸರಕಾರ ಸಾಲ ಮರುಪಾವತಿ ವಿನಾಯಿತಿ ಮಾಡಿದಾಗಲೇ, ಅನೇಕ ಬ್ಯಾಂಕ್‌ಗಳು ವಿರೋಧಿಸಿದ್ದವು. ಬ್ಯಾಂಕ್ ಮುಖ್ಯಸ್ಥರು ಈ ರೀತಿ ವಿನಾಯಿತಿ ನೀಡುವುದರಿಂದ ಬ್ಯಾಂಕ್‌ಗಳಿಗೆ ಸಮಸ್ಯೆಯಾಗುವುದು ಎಂದು ಹೇಳಿದ್ದರು.