ನವದೆಹಲಿ: ಜಿ.ಎಸ್.ಟಿ. ಮಂಡಳಿ ಸಭೆ ಫೆಬ್ರವರಿ 18 ರಂದು ನಡೆಯಲಿದ್ದು, ಸಿಮೆಂಟ್ ಮೇಲಿನ ಜಿಎಸ್‌ಟಿ ದರ ಇಳಿಕೆ ಮಾಡುವ ಸಾಧ್ಯತೆ ಇದೆ.
ಮಂಡಳಿಯ ಸಭೆಯಲ್ಲಿ ದರ ಇಳಿಕೆ ಬಗ್ಗೆ ನಿರ್ಧಾರ ಕೈಗೊಂಡಲ್ಲಿ ಸಿಮೆಂಟ್ ದರ ಶೇಕಡ 10 ರಷ್ಟು ಕಡಿಮೆಯಾಗಲಿದೆ. ಪ್ರತಿ ಚೀಲಕ್ಕೆ 35 ರಿಂದ 40 ರೂಪಾಯಿ ಕಡಿಮೆ ಆಗಬಹುದು ಎಂದು ಹೇಳಲಾಗಿದೆ.
ಅತ್ಯಂತ ಗರಿಷ್ಠ ಜಿ.ಎಸ್.ಟಿ. ತೆರಿಗೆ ಸ್ಲ್ಯಾಬ್ ಶೇಕಡ 28ರ ದರದ ಸರಕುಗಳ ಪಟ್ಟಿಯಲ್ಲಿ ಸಿಮೆಂಟ್ ಇದೆ. ಇದನ್ನು ಕಡಿಮೆ ಮಾಡಬೇಕೆಂಬ ಬೇಡಿಕೆ ಇದ್ದು, ಸಿಮೆಂಟ್ ಮೇಲಿನ ತೆರಿಗೆ ಕಡಿಮೆ ಮಾಡಬೇಕು ಎನ್ನುವ ಉದ್ಯಮದ ಬೇಡಕೆಯನ್ನು ಪರಿಗಣಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಹೇಳಿದ್ದರು. ಜಿಎಸ್‌ಟಿ ಮಂಡಳಿ ಸಭೆಯಲ್ಲಿ ಸಿಮೆಂಟ್ ಮೇಲಿನ ತೆರಿಗೆ ತಗ್ಗಿಸುವ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.