ರೈಲ್ವೇ ಇಲಾಖೆಯು ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ 2018ರಲ್ಲಿ ಆರಂಭಿಸಿದ್ದ ಯೋಜನೆಯೊಂದನ್ನು ಸಾಕಾರಗೊಳಿಸಲು ಇದೀಗ ಸಿದ್ಧತೆ ನಡೆಸಿಕೊಂಡಿದ್ದು, 20 ವಿನೂತನ ಆವಿಷ್ಕಾರಗಳನ್ನು ಇಡೀ ದೇಶಾದ್ಯಂತ ಜಾರಿಗೊಳಿಸಲು ಮುಂದಾಗಿದೆ.
ಝೋನಲ್ ಪ್ರಕಾರ ಅಥವಾ ರೈಲ್ವೇ ನಿಲ್ದಾಣಗಳಲ್ಲಿ ತೆಗೆದುಕೊಳ್ಳುವ ಕೆಲವು ವಿನೂತನ ಆವಿಷ್ಕಾರಗಳಿಂದ ಪ್ರಯಾಣಿಕರಿಗೆ ಸಹಾಯವಾಗುವುದಾದರೆ, ದೇಶದೆಲ್ಲೆಡೆ ವಿಸ್ತರಿಸಲು ಮುಂದಾಗಿದೆ. 2018ರಲ್ಲಿ ಪೋರ್ಟಲ್ ಒಂದನ್ನು ಆರಂಭಿಸಿ, ಝೋನಲ್‌ವಾರು ವಿನೂತನ ಆವಿಷ್ಕಾರಗಳ ಪಟ್ಟಿ, ಅದರಿಂದ ಜನರಿಗೆ ಆಗುವ ಲಾಭದ ಬಗ್ಗೆ ಮಾಹಿತಿ ನೀಡುವಂತೆ ಕೇಳಿದ್ದರು. ಇದಕ್ಕೆ ದೇಶದ ವಿವಿಧ ಭಾಗದಿಂದ ಒಟ್ಟು 2645 ವಿಷಯಗಳು ಬಂದಿದ್ದವು. ಇದರಲ್ಲಿ ಮೊದಲ 20ನ್ನು ಕೇಂದ್ರ ರೈಲ್ವೇ ಮಂಡಳಿ ಒಪ್ಪಿಗೆ ನೀಡಿ, ದೇಶಾದ್ಯಂತ ಜಾರಿಗೊಳಿಸಲು ಒಪ್ಪಿದೆ.
20 ಅಂಶಗಳಲ್ಲಿ ಪ್ರಮುಖವಾಗಿ ಪ್ರಯಾಣಿಕರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಅಲ್ಲದೇ ರಿಯಲ್‌ಟೈಂ ಸಿಸಿ ಟಿವಿ ಟ್ರಾಕಿಂಗ್, ವಿದ್ಯುತ್ ರಹಿತ ನೈಸರ್ಗಿಕ ವಾಟರ್ ಕೂಲರ್ ಅನ್ನು ಪರಿಚಯಿಸಲು ನಿರ್ಧರಿಸಿದೆ. ಇದನ್ನು ಈಗಾಗಲೇ ಮುಂಬೈನ ಕೆಲ ನಿಲ್ದಾಣದಲ್ಲಿ ಜಾರಿಗೊಳಿಸಲಾಗಿದೆ. ಕೊರೋನಾ ವೈರಸ್ ಹೆಚ್ಚಾಗುತ್ತಿರುವುದರಿಂದ ಝೀರೋ ಕಾಂಟ್ಯಾಕ್ಟ್ ಗೆ ಹೆಚ್ಚಿನ ಆದ್ಯತೆ ನೀಡಲು ಇ-ಟಿಕೆಟ್‌ಗೆ ಹೆಚ್ಚಿನ ಆದ್ಯತೆ ನೀಡಲು ಮುಂದಾಗಿದೆ.