ನವದೆಹಲಿ: ಲಾಕ್ಡೌನ್ ಸಮಯದಲ್ಲಿನ ಸಾಲಗಳಿಗೆ ಚಕ್ರಬಡ್ಡಿ ವಿನಾಯಿತಿ ನೀಡಲಾಗಿದ್ದು ದಸರಾ ಹಬ್ಬದ ಹೊತ್ತಲ್ಲೇ ಗಿಫ್ಟ್ ಸಿಕ್ಕಿದೆ. ಸಾಲದ ಕಂತು ಪಾವತಿಸಿದವರ ಚಕ್ರಬಡ್ಡಿ ಹಣ ಕ್ಯಾಶ್ ಬ್ಯಾಕ್ ನೀಡಲಾಗುತ್ತದೆ.
ಕಂತು ಪಾವತಿಸದಿದ್ದರೆ ವಿನಾಯಿತಿ ಸಿಗಲಿದೆ. ಸಾಲ ನೀಡಿದ ಸಂಸ್ಥೆಯಿಂದಲೇ ಖಾತೆಗೆ ಹಣ ಮರುಪಾವತಿಸಲು ಕೇಂದ್ರ ಸರ್ಕಾರ ಆದೇಶಿಸಿದೆ. ಎರಡು ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತದ ಸಾಲ ಪಡೆದ ವ್ಯಕ್ತಿಗಳು ಅಥವಾ ಸಣ್ಣ ಉದ್ದಿಮೆಗಳಿಗೆ ಮಾರ್ಚ್ 1 ರಿಂದ ಆಗಸ್ಟ್ 31ರ ವರೆಗಿನ ಆರು ತಿಂಗಳ ಅವಧಿಗೆ ಪೂರ್ಣ ಅವಧಿಗೆ ಅಥವಾ ಭಾಗಶಃ ಅವಧಿಗೆ ಸಾಲದ ಕಂತು ಪಾವತಿ ಮುಂದೂಡಿಕೆ ಸೌಲಭ್ಯವನ್ನು ಪಡೆದುಕೊಂಡವರಿಗೆ ಸಾಲದ ಅಸಲಿನ ಬಡ್ಡಿ ಮೇಲೆ ವಿಧಿಸುವ ಬಡ್ಡಿ ಮನ್ನಾ ಮಾಡಲಾಗಿದೆ.
ಶೇಕಡ 8ರ ಬಡ್ಡಿದರದಲ್ಲಿ ಒಂದು ಕೋಟಿ ರೂಪಾಯಿ ಸಾಲ ಪಡೆದ ವ್ಯಕ್ತಿಗೆ ಸುಮಾರು 16 ಸಾವಿರ ರೂಪಾಯಿ ಚಕ್ರಬಡ್ಡಿ ಪಾವತಿಯಿಂದ ವಿನಾಯಿತಿ ದೊರೆಯುತ್ತದೆ. ಸಾಲದ ಕಂತು ಪಾವತಿಸಿದವರಿಗೆ ಅಷ್ಟೇ ಮೊತ್ತದ ಕ್ಯಾಶ್ ಬ್ಯಾಕ್ ಸೌಲಭ್ಯ ಸಿಗಬಹುದೆಂದು ಹೇಳಲಾಗಿದೆ.