ನವದೆಹಲಿ: ಆಸ್ಪತ್ರೆ, ಪಾರ್ಟಿ ಹಾಲ್, ಛತ್ರಗಳಲ್ಲಿ ಪಾನ್ ರಹಿತ ನಗದು ವಹಿವಾಟು ಇನ್ನುಮುಂದೆ ಕಷ್ಟವಾಗಬಹುದು.
ನಗದು ಬಳಕೆದಾರರ ಮೇಲೆ ಐಟಿ ಇಲಾಖೆ ಕಣ್ಣಿಟ್ಟಿದೆ. ಆಸ್ಪತ್ರೆಗಳಲ್ಲಿ, ಮದುವೆ ಛತ್ರಗಳು, ಪಾರ್ಟಿ ಹಾಲ್ ಗಳ ಬಾಡಿಗೆಯನ್ನು ನಗದು ರೂಪದಲ್ಲಿ ನೀಡುವವರ ಮೇಲೆ ಐಟಿ ಇಲಾಖೆ ಮುಂದಾಗಿದ್ದು, ನಗದು ವಹಿವಾಟುಗಳಲ್ಲಿ ಪಾನ್ ಸಂಖ್ಯೆಯನ್ನು ಕಡ್ಡಾಯವಾಗಿ ಬಳಸಬೇಕೆಂದು ಸೂಚಿಸಿದೆ.
ಈ ಕಾನೂನು ಜಾರಿಯಲ್ಲಿದ್ದರೂ ಅದು ಬಹುತೇಕ ಪಾಲನೆಯಾಗುತ್ತಿಲ್ಲ. ನಗದು ವಹಿವಾಟುಗಳು ಐಟಿ ರಿಟರ್ನ್ಸ್ ನಲ್ಲಿ ದಾಖಲಾಗದೆ ತೆರಿಗೆಯಿಂದ ತಪ್ಪಿಸಿಕೊಳ್ಳಲಾಗುತ್ತಿದೆ. ದೊಡ್ಡ ಮೊತ್ತದ ಬಿಲ್ ಪಾವತಿ ಸಂದರ್ಭದಲ್ಲಿ ಕೆಲವು ಆಸ್ಪತ್ರೆಗಳು ರೋಗಿಗಳಿಂದ ಪಾನ್ ನಂಬರ್ ಸಂಗ್ರಹಿಸದೆ ಹಣ ಸ್ವೀಕರಿಸುತ್ತಿವೆ. ಪಾರ್ಟಿ ಹಾಲ್ ಗಳ ಮಾಲೀಕರು ಕೂಡ ಅಸಮರ್ಪಕ ಲೆಕ್ಕ ತೋರಿಸಿ ತೆರಿಗೆ ವಂಚಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಇಲಾಖೆ ನಗದು ವ್ಯವಹಾರದ ಮೂಲಕ ತೆರಿಗೆ ವಂಚಿಸುತ್ತಿರುವ ಆಸ್ಪತ್ರೆಗಳು, ಮದುವೆ ಛತ್ರಗಳು, ಪಾರ್ಟಿ ಹಾಲ್ ಗಳು ಮತ್ತು ಕೆಲವು ವೃತ್ತಿ ಪರರ ಮೇಲೆ ಕ್ರಮಕ್ಕೆ ಮುಂದಾಗಿದೆ ಎಂದು ಹೇಳಲಾಗಿದೆ.