ನವದೆಹಲಿ: 2021 ರಲ್ಲಿ ಹೊಸ ಕಾರು ಖರೀದಿಸಬೇಕೆಂದು ಕೊಂಡವರಿಗೆ ಮುಖ್ಯ ಮಾಹಿತಿ ಇಲ್ಲಿದೆ. ಜನವರಿಯಿಂದ ಮಾರುತಿ ಸುಜುಕಿ ಕಂಪನಿ ಕಾರ್ ಬೆಲೆ ಏರಿಕೆ ಮಾಡುವುದಾಗಿ ಹೇಳಿದೆ.
ಇನ್ನು ಫೋರ್ಡ್ ಇಂಡಿಯಾ ಕಂಪನಿ ಕೂಡ ಜನವರಿ 1 ರಿಂದ ಎಲ್ಲಾ ಮಾದರಿಯ ಕಾರ್ ಗಳ ಬೆಲೆ ಏರಿಕೆ ಮಾಡುವುದಾಗಿ ತಿಳಿಸಿದೆ. ತಯಾರಿಕಾ ವೆಚ್ಚ ಜಾಸ್ತಿ ಆಗುತ್ತಿರುವ ಕಾರಣ ಬೆಲೆ ಏರಿಕೆ ಮಾಡಲಾಗುತ್ತಿದೆ. ಶೇಕಡ 1 ರಿಂದ ಶೇಕಡ 3 ರಷ್ಟು ಎಲ್ಲ ಮಾದರಿಯ ಕಾರ್ ಗಳ ಬೆಲೆ ಏರಿಕೆ ಮಾಡಲು ತೀರ್ಮಾನಿಸಲಾಗಿದೆ. ಇದರಿಂದ ಇದರಿಂದ 5 ಸಾವಿರ ರೂ.ನಿಂದ 35 ಸಾವಿರ ರೂಪಾಯಿಯವರೆಗೆ ದರ ಹೆಚ್ಚಾಗಬಹುದು ಎಂದು ಫೋರ್ಡ್ ಇಂಡಿಯಾ ಕಂಪನಿಯ ಮಾರುಕಟ್ಟೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ವಿನಯ್ ರೈನಾ ತಿಳಿಸಿದ್ದಾರೆ.
ಹೊಸ ಕಾರ್ ಗಳ ಬೆಲೆ ಏರಿಕೆಯಾಗುವುದರಿಂದ ಹಳೆ ಕಾರ್ ಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಬೆಲೆ ಕೂಡ ಏರಿಕೆಯಾಗಲಿದೆ ಎಂದು ಹೇಳಲಾಗಿದೆ.