ದಕ್ಷಿಣ ರೈಲ್ವೆ ವಲಯದಲ್ಲಿ ಶೇ.49.5 ರಷ್ಟು ಹಿಂದಿ ಮಾತನಾಡುವ ರಾಜ್ಯಗಳ ತಂತ್ರಜ್ಞರು ಮತ್ತು ಅಭಿಯಂತರರೇ ತುಂಬಿಕೊಂಡಿದ್ದಾರೆ.
ಲೋಕಸಭೆಯಲ್ಲಿ ಮಧುರೈ ಸಂಸದ ಎಸ್. ವೆಂಕಟೇಸನ್ ಪ್ರಶ್ನೆಗೆ ಉತ್ತರಿಸಿರುವ ರೈಲ್ವೆ ಸಚಿವ ಪಿಯೂಷ್ ಗೋಯಲ್, 2018 ರಲ್ಲಿ ನಡೆದ ನೇಮಕಾತಿ ವೇಳೆ ಶೇ.49.5 ರಷ್ಟು ಮಂದಿ ಹಿಂದಿ ಮಾತನಾಡುವ ರಾಜ್ಯಗಳವರೇ ನೇಮಕವಾಗಿದ್ದಾರೆ ಎಂದಿದ್ದಾರೆ.
ಒಟ್ಟು 3,730 ತಂತ್ರಜ್ಞರು ಮತ್ತು 1,846 ಕಿರಿಯ ಅಭಿಯಂತರರ ಅಭ್ಯರ್ಥಿಗಳು ಹಿಂದಿಯಲ್ಲಿ ಪರೀಕ್ಷೆ ಬರೆದಿದ್ದಾರೆ. ಉಳಿದಂತೆ 536 (ಶೇ.14) ಅಭ್ಯರ್ಥಿಗಳು ಮಲೆಯಾಳದಲ್ಲಿ, 407 (ಶೇ.10.9) ಅಭ್ಯರ್ಥಿಗಳು ತಮಿಳಿನಲ್ಲಿ ಪರೀಕ್ಷೆ ಬರೆದಿದ್ದರೆ, ಕೇವಲ 517 (ಶೇ.13.8) ಅಭ್ಯರ್ಥಿಗಳು ಆಂಗ್ಲ ಭಾಷೆಯಲ್ಲಿ ಪರೀಕ್ಷೆ ಬರೆದಿದ್ದಾರೆ.