ಕೆನರಾ ಬ್ಯಾಂಕ್ 666 ದಿನಗಳ ಅವಧಿಗೆ ವಿಶೇಷ ನಿಶ್ಚಿತ ಠೇವಣಿ ಯೋಜನೆ ಪ್ರಾರಂಭಿಸಿದೆ. ಈ ಯೋಜನೆಯ ಪ್ರಕಾರ, ಸಾಮಾನ್ಯ ಗ್ರಾಹಕರಿಗೆ 7% ಬಡ್ಡಿದರವನ್ನು ನೀಡುತ್ತಿದ್ದು, ಹಿರಿಯ ನಾಗರಿಕರು ಈ ಠೇವಣಿಗಳ ಮೇಲೆ 7.5% ರಷ್ಟು ಬಡ್ಡಿ ಪಡೆಯುತ್ತಾರೆ. ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಪರಿಚಯಿಸಿದ ಈ ವಿಶೇಷ ಅವಧಿಯ ಠೇವಣಿ ಯೋಜನೆಯು 2 ಕೋಟಿ ರೂ.ಗಿಂತ ಕಡಿಮೆ ಮೊತ್ತವಾಗಿದೆ.
ಈಗ ನಿಮ್ಮ ಹೂಡಿಕೆಯ ಮೇಲೆ ಗರಿಷ್ಠ ಆದಾಯವನ್ನು ಪಡೆಯಿರಿ. 666 ದಿನಗಳವರೆಗೆ ಹೂಡಿಕೆ ಮಾಡುವ ಮೂಲಕ 7.50% ಬಡ್ಡಿಯನ್ನು ನೀಡುವ ಕೆನರಾ ವಿಶೇಷ ಠೇವಣಿ ಯೋಜನೆಯನ್ನು ಪ್ರಸ್ತುತಪಡಿಸಲಾಗುತ್ತಿದೆ ಎಂದು ಕೆನರಾ ಬ್ಯಾಂಕ್ ಟ್ವೀಟ್ ಮಾಡಿದೆ.
ಕೆನರಾ ಬ್ಯಾಂಕ್ ಸಾಲದ ಬಡ್ಡಿದರ ಇಂದಿನಿಂದ ಜಾರಿಗೆ
ರೆಪೊ ಲಿಂಕ್ಡ್ ಲೆಂಡಿಂಗ್ ರೇಟ್(RLLR) ಮತ್ತು ಮಾರ್ಜಿನಲ್ ಕಾಸ್ಟ್ ಆಫ್ ಫಂಡ್ಸ್ ಬೇಸ್ಡ್ ಲೆಂಡಿಂಗ್ ರೇಟ್(MCLR) ಅನ್ನು ಸಾರ್ವಜನಿಕ ವಲಯದ ಕೆನರಾ ಬ್ಯಾಂಕ್ ಹೆಚ್ಚಿಸಿದೆ. ಪರಿಷ್ಕೃತ ದರಗಳು ಇಂದು ಅಕ್ಟೋಬರ್ 7, 2022 ರಂದು ಜಾರಿಗೆ ಬರಲಿವೆ.