
ಬಹುತೇಕರು ಬಾಲ್ಯದಲ್ಲಿ ಟಿವಿ ಧಾರಾವಾಹಿಗಳನ್ನು ನೋಡಿ ಅದರ ರಿದಮ್ ಗೆ ಹೆಜ್ಜೆ ಹಾಕಿರುತ್ತೀರಿ. ಅಂಥವರಿಗೆ ಬಾಲ್ಯದ ನೆನಪು ಮಾಡಿಕೊಳ್ಳಲು ಒಂದೊಳ್ಳೆ ಟಾಸ್ಕ್ ಇಲ್ಲಿದೆ.
ಹಲ ವರ್ಷಗಳ ಹಿಂದೆ ಬರುತ್ತಿದ್ದ ಜಾಹೀರಾತುಗಳ ಪ್ರಮುಖ ಪಾತ್ರ ಅಥವಾ ಲೋಗೋವನ್ನು ಒಂದೇ ಫ್ರೇಮ್ ನಲ್ಲಿಟ್ಟು ಐಪಿಎಸ್ ಅಧಿಕಾರಿ ದೀಪಾಂಶು ಕಬ್ರಾ ಟ್ವೀಟ್ ಮಾಡಿ, ಇದು ಯಾವ ಜಾಹೀರಾತಿನ ಚಿತ್ರ ಅಥವಾ ಲೋಗೋಗಳು ಎಂದು ಗುರುತಿಸಿ ಎಂದು ಸವಾಲು ಹಾಕಿದ್ದಾರೆ.
ಸಾಕಷ್ಟು ನೆಟ್ಟಿಗರು ಅದಕ್ಕೆ ಜಾಹೀರಾತುಗಳ ಹೆಸರನ್ನು ಟ್ವಿಟರ್ ನಲ್ಲಿ ಪ್ರತಿಕ್ರಿಯೆಯಾಗಿ ಬರೆದಿದ್ದಾರೆ. ಅಮೂಲ್ ಬೇಬಿ, ನಿರ್ಮಾ ಹುಡುಗಿ, ಏರ್ ಇಂಡಿಯಾ, ಲಿಜ್ಜತ್ ಪಾಪಡ್, ವೊಡಾಫೋನ್, ಪಾರ್ಲೆಜಿ, ಒನಿಡಾ, ಬ್ರಿಟಾನಿಯಾ, ಟೈಗರ್ ಬಿಸ್ಕತ್, ಡೊಕೊಮೊ, ಅಂಬುಜಾ ಸಿಮೆಂಟ್…..ಹೀಗೆ ಜಾಹೀರಾತುಗಳ ಪಟ್ಟಿ ಬೆಳೆದಿದೆ.