ನವದೆಹಲಿ: ಕೇಬಲ್ ಟಿವಿ ಜಾಲ ನಿಯಮಗಳಿಗೆ ತಿದ್ದುಪಡಿ ಮಾಡಿ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಟಿವಿ ವಾಹಿನಿಗಳು ಪ್ರಸಾರ ಮಾಡುವ ಕಾರ್ಯಕ್ರಮಗಳ ಕುರಿತಾಗಿ ವೀಕ್ಷಕರು ದೂರು ಸಲ್ಲಿಸಲು ಕಾನೂನುಬದ್ಧ ಅವಕಾಶ ಕಲ್ಪಿಸಲಾಗಿದೆ.
1994 ರ ಕೇಬಲ್ ಟಿವಿ ನಿಯಮಗಳಿಗೆ ತಿದ್ದುಪಡಿ ತರಲಾಗಿದೆ. ಇದು ಪಾರದರ್ಶಕವಾಗಿದ್ದು, ಜನರಿಗೆ ಅನುಕೂಲವಾಗುತ್ತದೆ. ತಿದ್ದುಪಡಿಯ ಪ್ರಕಾರ, ಪ್ರಸಾರಕರ ಸ್ವಯಂ ನಿಯಂತ್ರಣ ಸಂಸ್ಥೆಗಳು ಇನ್ನು ಮುಂದೆ ಕೇಂದ್ರ ಸರ್ಕಾರದೊಂದಿಗೆ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.
ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದಿಂದ 900ಕ್ಕೂ ಹೆಚ್ಚು ಟಿವಿ ಚಾನೆಲ್ಗಳಿಗೆ ಅನುಮತಿ ನೀಡಲಾಗಿದ್ದು, ನಿಯಮಗಳನುಸಾರ ಕಾರ್ಯಕ್ರಮ, ಜಾಹೀರಾತು ಸಂಹಿತೆಯನ್ನು ಪಾಲಿಸಬೇಕಿದೆ. ಕಾರ್ಯಕ್ರಮದ ಕಂಟೆಂಟ್ ಬಗ್ಗೆ ವೀಕ್ಷಕರು ದೂರು ಸಲ್ಲಿಸಲು ಕಾನೂನುಬದ್ಧ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಲಾಗಿದೆ.