ವಿದೇಶಿ ಪ್ರಯಾಣದ ವೇಳೆ ಪ್ರಯಾಣ ವಿಮೆ ಪಡೆಯಲಾಗುತ್ತದೆ. ಆದ್ರೆ ದೇಶಿ ವಿಮಾನ ಪ್ರಯಾಣದ ವೇಳೆಯೂ ಪ್ರಯಾಣ ವಿಮೆ ಪಡೆಯುವುದು ಅನಿವಾರ್ಯವಾಗಲಿದೆ. ಈ ವಿಮೆ ಅನೇಕ ಸಮಸ್ಯೆಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಪರ್ಸ್ ಕಳ್ಳತನ, ವಿಮಾನ ರದ್ದು ಸೇರಿದಂತೆ ಅನೇಕ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ನೀವು ಪ್ರಯಾಣ ವಿಮೆ ಪಡೆಯುವುದು ಅನಿವಾರ್ಯವಾಗಿದೆ.
ದೇಶೀಯ ಪ್ರಯಾಣ ವಿಮಾ ಟಿಕೆಟ್‌ಗಳನ್ನು ಬುಕಿಂಗ್ ಸಮಯದಲ್ಲಿ ಟ್ರಾವೆಲ್ ಅಗ್ರಿಗೇಟರ್ ವೆಬ್‌ಸೈಟ್‌ನಿಂದ ಖರೀದಿಸಬಹುದು. ಆದರೆ ಟ್ರಾವೆಲ್ ಅಗ್ರಿಗೇಟರ್ ವಿಮಾ ಕಂಪನಿಯೊಂದಿಗೆ ಒಪ್ಪಂದ ಮಾಡಿಕೊಂಡಾಗ ಮಾತ್ರ ಇದು ಸಾಧ್ಯ. ಇಲ್ಲದಿದ್ದರೆ ನೀವು ಸಾಮಾನ್ಯ ವಿಮಾ ಕಂಪನಿಗಳಿಂದ ಆನ್‌ಲೈನ್ ಅಥವಾ ಆಫ್‌ಲೈನ್ ಪ್ರಯಾಣ ವಿಮಾ ಪಾಲಿಸಿಯನ್ನು ಖರೀದಿಸಬಹುದು.
ಸಿಂಗಲ್ ಟ್ರಿಪ್ ಟ್ರಾವೆಲ್ ಇನ್ಶುರೆನ್ಸ್ ಖರೀದಿಸಬಹುದು ಅಥವಾ ವಾರ್ಷಿಕ ಟ್ರಿಪ್ ಕವರ್ ತೆಗೆದುಕೊಳ್ಳಬಹುದು. ಆಗಾಗ್ಗೆ ಪ್ರಯಾಣ ಬೆಳೆಸುವ ಪ್ರಯಾಣಿಕರಿಗೆ ಮಲ್ಟಿ-ಟ್ರಿಪ್ ಕವರ್ ಅಗ್ಗವಾಗಿರುತ್ತದೆ. ಅವರು ಪಾಲಿಸಿಯನ್ನು ಮತ್ತೆ ಮತ್ತೆ ಖರೀದಿಸಬೇಕಾಗಿಲ್ಲ. ಗ್ರಾಹಕರು ತಮ್ಮ ಹೆಂಡತಿ, ಮಕ್ಕಳು, ಪೋಷಕರನ್ನು ಇದ್ರಲ್ಲಿ ಸೇರಿಸಬಹುದು.
ಆನ್‌ಲೈನ್ ಪ್ರಯಾಣ ವಿಮೆಗಾಗಿ ಅರ್ಜಿ ಸಲ್ಲಿಸುವಾಗ, ಕುಟುಂಬದ ಸದಸ್ಯರ ವಯಸ್ಸನ್ನು ನಮೂದಿಸುವುದು ಮುಖ್ಯ. ವಯಸ್ಸಿನ ವಿವರಗಳನ್ನು ನೀಡಿದ ನಂತರ, ಪ್ರೀಮಿಯಂ ಅನ್ನು ಅದರ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಪ್ರಯಾಣದ ದಿನಾಂಕ, ಹೆಸರು ಮತ್ತು ವಿಳಾಸವನ್ನು ಒದಗಿಸುವುದು ಅವಶ್ಯಕ. ನೀವು ವಿಮಾ ಪಾಲಿಸಿ ಪ್ರೀಮಿಯಂಗಳನ್ನು ನೆಟ್ ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್ ಅಥವಾ ಇ-ವ್ಯಾಲೆಟ್ ಮೂಲಕ ಪಾವತಿಸಬಹುದು.