ಸಾಂಕ್ರಾಮಿಕ ರೋಗ ಕೊರೊನಾ ಮಹಾಮಾರಿ ಮಧ್ಯೆಯೇ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ನಲ್ಲಿ ಅನೇಕ ಘೋಷಣೆಗಳನ್ನು ಮಾಡಿದ್ದಾರೆ. ಬಜೆಟ್ ನಲ್ಲಿ ಮನೆ ಖರೀದಿದಾರರಿಗೆ ವಿಶೇಷ ರಿಯಾಯಿತಿ ನೀಡಿದ್ದಾರೆ. ಕೈಗೆಟಕುವ ಮನೆಗಳ ತೆರಿಗೆ ವಿನಾಯಿತಿ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಿದ್ದಾರೆ.
ಕೈಗೆಟುಕುವ ಮನೆ ಖರೀದಿದಾರರಿಗೆ ಜುಲೈ 2019 ರ ಬಜೆಟ್ನಲ್ಲಿ ಕೇಂದ್ರ ಸರ್ಕಾರ 1.5 ಲಕ್ಷ ರೂಪಾಯಿಗಳವರೆಗೆ ಹೆಚ್ಚುವರಿ ತೆರಿಗೆ ರಿಯಾಯಿತಿ ಘೋಷಿಸಿತ್ತು. ಈ ತೆರಿಗೆ ವಿನಾಯಿತಿಯನ್ನು ಈ ಬಾರಿ ಬಜೆಟ್ ನಲ್ಲಿ ವಿಸ್ತರಿಸಲಾಗಿದೆ. ಕೈಗೆಟುಕುವ ವಸತಿ ಯೋಜನೆಯಲ್ಲಿ 45 ಲಕ್ಷ ರೂಪಾಯಿಗಿಂತ ಕಡಿಮೆ ಮೌಲ್ಯದ ಮನೆಗಳನ್ನು ಸೇರಿಸಲಾಗಿದೆ. 45 ಲಕ್ಷ ರೂಪಾಯಿ ಅಥವಾ ಅದಕ್ಕಿಂತ ಕಡಿಮೆ ಬೆಲೆಗೆ ಮನೆ ಖರೀದಿಸುತ್ತಿದ್ದರೆ, ಬಡ್ಡಿ ಪಾವತಿಯ ಮೇಲೆ 1.5 ಲಕ್ಷ ರೂಪಾಯಿಗಳ ತೆರಿಗೆ ರಿಯಾಯಿತಿ ಸಿಗಲಿದೆ.
ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ ಇಇಎ ಅಡಿಯಲ್ಲಿ ಈ ವಿನಾಯಿತಿ ಸಿಗಲಿದೆ. ಈ ಯೋಜನೆ ಮುಂದಿನ ವರ್ಷ ಮಾರ್ಚ್ 31 ರವರೆಗೆ ಮಾನ್ಯವಾಗಿರುತ್ತದೆ. ವಲಸೆ ಕಾರ್ಮಿಕರಿಗೆ ಕೈಗೆಟುಕುವ ವಸತಿ ಒದಗಿಸುವ ಸಲುವಾಗಿ, ಹಣಕಾಸು ಸಚಿವರು ಕೈಗೆಟುಕುವ ಬಾಡಿಗೆ ವಸತಿ ಯೋಜನೆಯಡಿ ತೆರಿಗೆ ಪಾವತಿಸಬೇಕಾದ ಅವಧಿಯನ್ನು ಇನ್ನೊಂದು ವರ್ಷ ವಿಸ್ತರಿಸಿದ್ದಾರೆ.