ನವದೆಹಲಿ: ದೇಶದ ಜನರು ಬೂಸ್ಟರ್ ಡೋಸ್ ಲಸಿಕೆಯನ್ನು ಹಣ ಕೊಟ್ಟು ಪಡೆದುಕೊಳ್ಳಬೇಕು ಎನ್ನುವ ಸುಳಿವನ್ನು ಕೇಂದ್ರ ಸರ್ಕಾರ ನೀಡಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2022 -23 ನೇ ಸಾಲಿನ ಬಜೆಟ್ನಲ್ಲಿ ಕೊರೋನಾ ಲಸಿಕೆಗಾಗಿ ಕೇವಲ 5 ಸಾವಿರ ಕೋಟಿ ರೂಪಾಯಿ ಮೀಸಲಿಡಲಾಗಿದೆ. ಹಿಂದಿನ ಸಾಲಿನಲ್ಲಿ 35,000 ಕೋಟಿ ರೂಪಾಯಿ ಮೀಸಲಿಡಲಾಗಿತ್ತು.
ಈ ವರ್ಷ ಕೇವಲ 5 ಸಾವಿರ ಕೋಟಿ ರೂಪಾಯಿ ನೀಡಿರುವುದರಿಂದ ಕೇಂದ್ರ ಸರ್ಕಾರ 2 ಡೋಸ್ ಲಸಿಕೆ ಪೂರ್ಣಗೊಳಿಸುವ ಉದ್ದೇಶವನ್ನು ಮಾತ್ರ ಹೊಂದಿದಂತಿದೆ. ಬೂಸ್ಟರ್ ನೀಡಿಕೆ ಕಾರ್ಯ ಆರಂಭವಾಗಿ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರಿಗೆ, 60 ವರ್ಷ ಮೇಲ್ಪಟ್ಟ ಕಾಯಿಲೆ ಪೀಡಿತರಿಗೆ ಮಾತ್ರ ನೀಡಲಾಗುತ್ತಿದೆ.
ಮುಂದಿನ ದಿನಗಳಲ್ಲಿ 15 ಅಥವಾ 18 ವರ್ಷ ಮೇಲ್ಪಟ್ಟವರು ಬೂಸ್ಟರ್ ಡೋಸ್ ಪಡೆದುಕೊಳ್ಳಬೇಕಾದರೆ ಉಚಿತವಾಗಿ ಇರುವುದಿಲ್ಲ. ಹಣ ಕೊಟ್ಟು ಲಸಿಕೆ ಪಡೆಯಬೇಕಾಗಬಹುದು ಎಂದು ಹೇಳಲಾಗಿದೆ.