alex Certify 10 ಸಾವಿರಕ್ಕಿಂತ ಕಡಿಮೆ ಹೂಡಿಕೆ ಮಾಡಿ ಶುರುಮಾಡಿ ಈ ಬ್ಯುಸಿನೆಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

10 ಸಾವಿರಕ್ಕಿಂತ ಕಡಿಮೆ ಹೂಡಿಕೆ ಮಾಡಿ ಶುರುಮಾಡಿ ಈ ಬ್ಯುಸಿನೆಸ್

ಕೊರೊನಾದಿಂದ ವಿಶ್ವ ಸಂಕಷ್ಟದಲ್ಲಿದೆ. ಕೊರೊನಾ ಮಧ್ಯೆಯೇ ಜನರು ಜೀವನ ನಡೆಸುತ್ತಿದ್ದಾರೆ. ಆದ್ರೆ ಕೊರೊನಾ ಅನೇಕರ ಕೆಲಸ ಕಸಿದುಕೊಂಡಿದೆ. ನೌಕರಿ ಸಿಗದೆ ಪರದಾಡುತ್ತಿರುವವರು ಬ್ಯುಸಿನೆಸ್ ಶುರು ಮಾಡಬಹುದು. ಇದಕ್ಕೆ ಮೋದಿ ಸರ್ಕಾರ ಸಾಲದ ಸೌಲಭ್ಯ ಕೂಡ ನೀಡ್ತಿದೆ. ಆತ್ಮನಿರ್ಭರ್ ಭಾರತ್ ಮಿಷನ್ ಅಡಿಯಲ್ಲಿ ನೀವು ಸಾಲ ಪಡೆಯಬಹುದು.

ಬರವಣಿಗೆ ಬಗ್ಗೆ ಸ್ವಲ್ಪ ಆಸಕ್ತಿಯಿದ್ದರೆ ಬ್ಲಾಗಿಂಗ್ ಶುರು ಮಾಡಬಹುದು. ಇದಕ್ಕೆ ಕಂಪ್ಯೂಟರ್ ಅಥವಾ ಲ್ಯಾಪ್ ಟಾಪ್ ಸಾಕು. ಬ್ಲಾಗಿಂಗ್ ಮೂಲಕ ಓದುಗರನ್ನು ಸೆಳೆದು ನಂತ್ರ ನಿಮ್ಮದೆ ಸ್ವಃತ ವೆಬ್ಸೈಟ್ ಕೂಡ ತೆರೆಯಬಹುದು. ನಿಮ್ಮ ಬರವಣಿಗೆ ಆಕರ್ಷಕ ಹಾಗೂ ಆಸಕ್ತಿದಾಯಕವಾಗಿದ್ದರೆ ಹೆಚ್ಚಿನ ಹಣವನ್ನು ನೀವು ಇದ್ರಿಂದ ಗಳಿಸಬಹುದು.

ಕೆಲ ಮಕ್ಕಳು ಯುಟ್ಯೂಬ್ ಚಾನೆಲ್‌ನಿಂದ ಕೋಟ್ಯಂತರ ರೂಪಾಯಿಗಳನ್ನು ಗಳಿಸುತ್ತಿದ್ದಾರೆ. 9 ವರ್ಷದ ಮಗು ರಿಯಾನ್ ಗಳಿಕೆ 200 ಕೋಟಿ ರೂಪಾಯಿ. ರಿಯಾನ್ ತನ್ನ ವಿಡಿಯೊಗಳನ್ನು ಯೂಟ್ಯೂಬ್‌ನಲ್ಲಿ ಅಪ್‌ಲೋಡ್ ಮಾಡಿ ಕೋಟ್ಯಂತರ ರೂಪಾಯಿಗಳನ್ನು ಸಂಪಾದಿಸುತ್ತಾನೆ. ಯೂಟ್ಯೂಬ್‌ನಲ್ಲಿ ವಿಡಿಯೊಗಳನ್ನು ಹಾಕುವ ಮೂಲಕ ನೀವು ಕೂಡ ಹಣ ಗಳಿಸಬಹುದು. ಇದು ಕೂಡ ಜನರ ಗಮನ ಸೆಳೆಯುವಂತಿರಬೇಕು. ಒಳ್ಳೆ ಮಾಹಿತಿಯಿಂದ ಕೂಡಿದ ಅಥವಾ ತಮಾಷೆಯಿಂದ ಕೂಡಿದ ಚಾನೆಲ್ ಗಳನ್ನು ಹೆಚ್ಚಿನ ಜನರು ವೀಕ್ಷಿಸುತ್ತಾರೆ ಎಂಬುದನ್ನು ನೆನಪಿಡಿ.

ಯಾವುದೇ ವಿಷ್ಯದಲ್ಲಿ ನೀವು ಪರಿಣಿತರಾಗಿದ್ದರೆ ಆನ್ಲೈನ್ ಕೋರ್ಸ್ ಪ್ರಾರಂಬಿಸಿ. ಬ್ಯಾಂಕ್, ಐಎಎಸ್ ಪರೀಕ್ಷೆಗೆ ತರಬೇತಿ ನೀಡುವುದ್ರಿಂದ ಹಿಡಿದು ಕೊರೊನಾ ಸಂದರ್ಭದಲ್ಲಿ ಯೋಗ, ಡಾನ್ಸ್, ಸಂಗೀತ ಎಲ್ಲವೂ ಆನ್ಲೈನ್ ಆಗಿದೆ. ಹಾಗಾಗಿ ಚಿತ್ರಕಲೆಯಲ್ಲಿ ನೀವು ಪರಿಣಿತರಾಗಿದ್ದರೆ ಅದನ್ನೂ ಕೂಡ ಆನ್ಲೈನ್ ನಲ್ಲಿ ಕಲಿಸಬಹುದು.

ಅನುವಾದದ ಸಾಮರ್ಥ್ಯವನ್ನು ನೀವು ಹೊಂದಿದ್ದರೆ ಗೋಸ್ಟ್ ರೈಟರ್ ಆಗಬಹುದು. ಕೆಲ ಕಂಪನಿಗಳು ನಿಮಗೆ ಅನುವಾದದ ಕೆಲಸ ನೀಡುತ್ತವೆ. ಆದ್ರೆ ಅಲ್ಲಿ ನಿಮ್ಮ ಹೆಸರನ್ನು ಹಾಕಲಾಗುವುದಿಲ್ಲ. ಹಣ ಮಾತ್ರ ಸಿಗುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...