alex Certify ಯಾವುದೇ ಟೆನ್ಷನ್ ಇಲ್ದೆ ಶುರು ಮಾಡಿ ಈ ವ್ಯಾಪಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಯಾವುದೇ ಟೆನ್ಷನ್ ಇಲ್ದೆ ಶುರು ಮಾಡಿ ಈ ವ್ಯಾಪಾರ

ಹೊಸ ಉದ್ಯೋಗದ ಹುಡುಕಾಟದಲ್ಲಿದ್ದರೆ ನಿಮಗೊಂದು ಖುಷಿ ಸುದ್ದಿಯಿದೆ. ದೇಶದ ಪ್ರಸಿದ್ಧ ಕಂಪನಿ ಅಮುಲ್ ಹೊಸ ವರ್ಷದಲ್ಲಿ ಫ್ರಾಂಚೈಸಿ ನೀಡ್ತಿದೆ. ಸಣ್ಣ ಹೂಡಿಕೆ ಮಾಡಿ ಅಮುಲ್ ಉತ್ಪನ್ನಗಳ ಮಾರಾಟ ಮಾಡಿ ನಿಗದಿತ ಗಳಿಕೆ ಮಾಡಲು ಅವಕಾಶವಿದೆ. ಅಮುಲ್ ಫ್ರಾಂಚೈಸಿ ಪಡೆಯುವುದು ಲಾಭದಾಯಕ ವ್ಯವಹಾರ.

ಅಮುಲ್ ಯಾವುದೇ ಲಾಭ ಹಂಚಿಕೆಯಿಲ್ಲದೆ ಫ್ರಾಂಚೈಸಿಗಳನ್ನು ನೀಡುತ್ತಿದೆ. ಅಮುಲ್ ಫ್ರ್ಯಾಂಚೈಸಿ ತೆಗೆದುಕೊಳ್ಳುವ ವೆಚ್ಚವೂ ತುಂಬಾ ಹೆಚ್ಚಿಲ್ಲ. 2 ರಿಂದ 6 ಲಕ್ಷ ರೂಪಾಯಿಗಳನ್ನು ಖರ್ಚು ಮಾಡುವ ಮೂಲಕ ವ್ಯವಹಾರವನ್ನು ಪ್ರಾರಂಭಿಸಬಹುದು. ಪ್ರತಿ ತಿಂಗಳು ಸುಮಾರು 5 ರಿಂದ 10 ಲಕ್ಷ ರೂಪಾಯಿಗಳನ್ನು ಫ್ರಾಂಚೈಸಿ ಮೂಲಕ ಗಳಿಸಬಹುದು. ಆದ್ರೆ ನೀವು ಎಲ್ಲಿ ವ್ಯಾಪಾರ ಶುರು ಮಾಡುತ್ತೀರಿ ಎಂಬುದು ಮಹತ್ವದ ಪಾತ್ರವಹಿಸುತ್ತದೆ.

ಅಮುಲ್ ಎರಡು ರೀತಿಯ ಫ್ರಾಂಚೈಸಿಗಳನ್ನು ನೀಡುತ್ತಿದೆ. ಅಮುಲ್ ಔಟ್ಲೆಟ್, ಅಮುಲ್ ರೈಲ್ವೆ ಪಾರ್ಲರ್ ಅಥವಾ ಅಮುಲ್ ಕಿಯೋಸ್ಕ್. ಎರಡನೇಯದು ಅಮುಲ್ ಐಸ್ ಕ್ರೀಮ್ ಸ್ಕೂಪಿಂಗ್ ಪಾರ್ಲರ್ ಫ್ರ್ಯಾಂಚೈಸಿ. ಮೊದಲನೆಯದರಲ್ಲಿ ಹೂಡಿಕೆ ಮಾಡಲು ಬಯಸಿದರೆ, 2 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಬೇಕು. ಇನ್ನೊಂದು ಫ್ರ್ಯಾಂಚೈಸಿ ತೆಗೆದುಕೊಳ್ಳಲು ಬಯಸಿದ್ರೆ 5 ಲಕ್ಷ ರೂಪಾಯಿ ಹೂಡಿಕೆ ಮಾಡಬೇಕು.

ಅಮುಲ್ ಔಟ್‌ಲೆಟ್ ತೆಗೆದುಕೊಂಡಾಗ, ಕಂಪನಿಯು ಕನಿಷ್ಠ ಮಾರಾಟದ ಬೆಲೆಯಲ್ಲಿ ಕಮಿಷನ್ ಪಾವತಿಸುತ್ತದೆ. ಇದು ಉತ್ಪನ್ನವನ್ನು ಅವಲಂಭಿಸಿರುತ್ತದೆ. ಹಾಲಿನ ಮೇಲೆ ಶೇಕಡಾ 2.5, ಹಾಲಿನ ಉತ್ಪನ್ನಗಳ ಮೇಲೆ ಶೇಕಡಾ 10 ರಷ್ಟು ಮತ್ತು ಐಸ್ ಕ್ರೀಂಗೆ ಶೇಕಡಾ 20 ರಷ್ಟು ಕಮಿಷನ್ ನೀಡುತ್ತದೆ. 150 ಚದರ ಅಡಿ ಜಾಗದಲ್ಲಿ ಇದನ್ನು ಪ್ರಾರಂಭಿಸಬಹುದು. ಐಸ್ ಕ್ರೀಂ ಪಾರ್ಲರ್ ಗೆ ಕನಿಷ್ಠ 300 ಚದರ ಅಡಿ ಜಾಗಬೇಕು.

retail@amul.coop  ಗೆ ಮೇಲ್ ಮಾಡಿ ಅಥವಾ http://amul.com/m/amul-scooping-parlours ಗೆ ಭೇಟಿ ನೀಡುವ ಮೂಲಕ ಮಾಹಿತಿ ಪಡೆಯಬಹುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...