ಕೊರೊನಾ ಸಂದರ್ಭದಲ್ಲಿ ಅನೇಕರು ಕೆಲಸ ಕಳೆದುಕೊಂಡಿದ್ದಾರೆ. ಮತ್ತೆ ಕೆಲವರ ಸಂಬಳ ಕಡಿಮೆಯಾಗಿದೆ. ಇದ್ರಿಂದ ಬೇಸತ್ತ ಅನೇಕರು ಸ್ವಂತ ಉದ್ಯೋಗ ಶುರು ಮಾಡಲು ಮುಂದಾಗ್ತಿದ್ದಾರೆ. ಮನೆಯಲ್ಲೇ ಕುಳಿತು ಸ್ವಂತ ಉದ್ಯೋಗ ಶುರು ಮಾಡಲು ಈಗ ಸಾಕಷ್ಟು ಅವಕಾಶವಿದೆ. ಸ್ವದೇಶಿ ಅಭಿಯಾನದಡಿ ನಮ್ಮ ದೇಶದಲ್ಲಿ ತಯಾರಾಗುವ ವಸ್ತುಗಳಿಗೆ ಬೇಡಿಕೆ ಹೆಚ್ಚಾಗಿದೆ.
ಮನೆಯಲ್ಲೇ ಕುಳಿತು ಅನೇಕ ರೀತಿಯ ವ್ಯವಹಾರ ಶುರು ಮಾಡಬಹುದು. ಹೊಲಿಗೆ ಗೊತ್ತಿದ್ದರೆ ಮನೆಯಲ್ಲಿ ಹೊಲಿಗೆ ಯಂತ್ರವಿದ್ರೆ ಬಟ್ಟೆ ಹೊಲಿಯುವ ಕೆಲಸ ಮಾಡಬಹುದು. ಇದಕ್ಕೆ ಎಂದೂ ಬೇಡಿಕೆ ಕಡಿಮೆಯಾಗುವುದಿಲ್ಲ. ಹೊಸ ಹೊಸ ಡಿಸೈನ್ ಬಟ್ಟೆಗಳನ್ನು ನೀವು ವಿನ್ಯಾಸ ಮಾಡಿ ಕೈತುಂಬ ಹಣ ಗಳಿಸಬಹುದು.
ಮರದ ಕೆಲಸ ಗೊತ್ತಿದ್ದರೆ ಮನೆಯಲ್ಲಿ ಸಣ್ಣ ಮಕ್ಕಳ ಮರದ ಆಟಿಕೆ ತಯಾರಿಸಿ ಹಣ ಗಳಿಸಬಹುದು. ಮಕ್ಕಳ ಮರದ ಆಟಿಕೆಗಳಿಗೆ ಈಗ್ಲೂ ಬೇಡಿಕೆಯಿದೆ.
ಪ್ಲಾಸ್ಟಿಕ್ ಚೀಲಗಳು ಬ್ಯಾನ್ ಆಗಿದ್ದು, ಬಟ್ಟೆ ಚೀಲಗಳಿಗೆ ಬೇಡಿಕೆ ಬಂದಿದೆ. ನೀವು ಮನೆಯಲ್ಲೇ ಕುಳಿತು ಬಟ್ಟೆ ಚೀಲಗಳ ವ್ಯಾಪಾರ ಶುರು ಮಾಡಬಹುದು.
ಕೂದಲಿನ ಸೌಂದರ್ಯಕ್ಕೆ ಬಳಸುವ ಹೇರ್ ಪಿನ್, ಕ್ಲಿಪ್, ಹೆಡ್ ಬ್ಯಾಂಡ್ ಗಳನ್ನು ತಯಾರಿಸಬಹುದು. ಅವುಗಳನ್ನು ನೀವು ಆನ್ಲೈನ್ ಅಥವಾ ಆಫ್ಲೈನ್ ನಲ್ಲಿ ಮಾರಾಟ ಮಾಡಬಹುದು.
ಅಲಂಕಾರಿಕ ಹಾಗೂ ಕೈನಲ್ಲಿ ಮಾಡಿದ ದಿಂಬುಗಳು ಆಕರ್ಷಕವಾಗಿರುತ್ತವೆ. ಸೊಗಸಾದ ಬಟ್ಟೆಗಳನ್ನು ಖರೀದಿಸಿ ನೀವು ದಿಂಬಿನ ಕವರ್ ಮಾಡಿ ಮಾರಾಟ ಮಾಡಬಹುದು.
ಕೈನಿಂದ ತಯಾರಿಸಿದ ಸಾಬೂನು, ಶಾಂಪೂ, ಬಾಡಿ ಲೋಷನ್ ಗಳನ್ನು ಖರೀದಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಇವುಗಳ ಬಗ್ಗೆ ತರಬೇತಿ ಪಡೆದು ನೀವು ಮನೆಯಲ್ಲೇ ಸಾಬೂನು ತಯಾರಿಕೆ ಶುರು ಮಾಡಬಹುದು.
ತಂತ್ರಜ್ಞಾನ ಅವಲಂಬಿಸಿರುವವರ ಸಂಖ್ಯೆ ಹೆಚ್ಚಿದೆ. ಮನೆಯಲ್ಲಿಯೇ ಸ್ಮಾರ್ಟ್ಫೋನ್ ಕವರ್, ಟ್ಯಾಬ್ ಕವರ್ ಮಾಡಿ ಮಾರಾಟ ಮಾಡಬಹುದು.