ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮಂಡಿಸಲಿರುವ ಬಜೆಟ್ ಮೇಲಿನ ನಿರೀಕ್ಷೆ ಹೆಚ್ಚಾಗಿದೆ. ಕೊರೋನಾ ಕಾರಣದಿಂದ ಹಳಿ ತಪ್ಪಿರುವ ಆರ್ಥಿಕತೆಗೆ ಚೈತನ್ಯ ನೀಡಲು ಅನೇಕ ಯೋಜನೆಗಳನ್ನು ಪ್ರಕಟಿಸುವ ಸಾಧ್ಯತೆಯಿದೆ.
ನಿರ್ಮಲಾ ಸೀತಾರಾಮನ್ ಮೂರನೇ ಬಾರಿಗೆ ಬಜೆಟ್ ಮಂಡನೆ ಮಾಡುತ್ತಿದ್ದು, ಮೊದಲ ಬಾರಿಗೆ ಪೇಪರ್ಲೆಸ್ ಬಜೆಟ್ ಮಂಡಿಸಲಾಗುತ್ತಿದೆ. ಆರು ರಾಜ್ಯಗಳ ಚುನಾವಣೆ ಮೇಲೆ ಮೋದಿ ಕಣ್ಣಿಟ್ಟಿದ್ದು, ಆರ್ಥಿಕ ಚೇತರಿಕೆಗಾಗಿ ಸ್ಪೆಷಲ್ ಪ್ಯಾಕೇಜ್ ನೀಡಲಿದ್ದಾರೆ.
ಕೃಷಿ, ಉದ್ಯಮ, ಬಡವರಿಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಕಟ್ಟಕಡೆಯ ಪ್ರಜೆಗೂ ಲಸಿಕೆ ಉಚಿತವಾಗಿ ನೀಡಲಾಗುವುದು. ತೆರೆಗೆ ಯಥಾಸ್ಥಿತಿ ಇರಬಹುದು. ಮಧ್ಯಮವರ್ಗಕ್ಕೆ ರಿಲೀಫ್ ನೀಡಬಹುದು. ಕಿಸಾನ್ ಸಮ್ಮಾನ್ ಯೋಜನೆಯಡಿ ರೈತರಿಗೆ ವಾರ್ಷಿಕವಾಗಿ ನೀಡುತ್ತಿರುವ ಮೊತ್ತವನ್ನು ಹೆಚ್ಚಳ ಮಾಡಲಾಗುವುದು. ಸಾಲ ಮನ್ನಾ ಬಗ್ಗೆಯೂ ಘೋಷಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.