ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಮೂರನೇ ಬಾರಿಗೆ ತಮ್ಮ ಬಜೆಟ್ ಮಂಡಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿನ ಬಜೆಟ್ ಇದಾದ ಕಾರಣ ಸಹಜವಾಗಿಯೇ ಎಲ್ಲರ ಕುತೂಹಲ ಇಂದಿನ ಬಜೆಟ್ ನತ್ತ ನೆಟ್ಟಿದೆ. ಈ ಬಜೆಟ್ ನ ಪ್ರಮುಖ ಅಂಶಗಳು ಈ ಕೆಳಗಿನಂತಿದೆ.
ಕೊರೊನಾ ಸಂಕಷ್ಟದ ನಡುವೆಯೂ ದೇಶವಾಸಿಗಳ ನೆರವಿಗೆ ಕೇಂದ್ರ ಸರ್ಕಾರ ನಿಂತಿತ್ತು.
40 ಕೋಟಿ ಜನರಿಗೆ ನೇರವಾಗಿ ಹಣ ನೀಡಿದ ಹೆಗ್ಗಳಿಕೆ ಕೇಂದ್ರ ಸರ್ಕಾರದ್ದು.
ಮೇ 20 ರಂದು ಕೇಂದ್ರ ಸರ್ಕಾರ ಆತ್ಮ ನಿರ್ಭರ್ ಭಾರತ್ ಯೋಜನೆ ಘೋಷಿಸಿತ್ತು.
ಲಾಕ್ ಡೌನ್ ಬಳಿಕ ಪಿಎಂ ಗರೀಬ್ ಕಲ್ಯಾಣ್ ಯೋಜನೆ ಘೋಷಣೆ.
ಆತ್ಮ ನಿರ್ಭರ್ ಭಾರತ್ ಯೋಜನೆಯಡಿ 27.1 ಲಕ್ಷ ಕೋಟಿ ರೂ. ಪ್ಯಾಕೇಜ್.
ಭಾರತದಲ್ಲಿ ಈಗಾಗಲೇ ಎರಡು ಕೊರೊನಾ ಲಸಿಕೆ ಲಭ್ಯವಿದ್ದು, ಶೀಘ್ರದಲ್ಲೇ ಮತ್ತೆರೆಡು ಕೊರೊನಾ ಲಸಿಕೆ ಲಭ್ಯ.
ಲಸಿಕೆ ನೀಡಿಕೆಯಿಂದ ದೇಶದ ಆರ್ಥಿಕತೆಯಲ್ಲಿ ಚೇತರಿಕೆ.
ಕೊರೊನಾ ಸಕ್ರಿಯ ಪ್ರಕರಣಗಳು ಭಾರತದಲ್ಲಿ ಅತ್ಯಂತ ಕಡಿಮೆಯಿದೆ.
17 ಸಾವಿರ ಗ್ರಾಮೀಣ ವೆಲ್ನೆಸ್ ಸೆಂಟರ್ ಗಳಿಗೆ ಬೆಂಬಲ.
ರಾಷ್ಟ್ರೀಯ ಆರೋಗ್ಯ ಶಿಕ್ಷಣ ಸಂಸ್ಥೆಗಳನ್ನು ಬಲಗೊಳಿಸುತ್ತೇವೆ.
ಆರೋಗ್ಯ ಕ್ಷೇತ್ರದ ಮೂರು ವಲಯಗಳನ್ನು ಬಲಗೊಳಿಸಲು ಆದ್ಯತೆ.
ಮೂಲ ಸೌಕರ್ಯಕ್ಕೆ 5 ಲಕ್ಷ ಕೋಟಿ ರೂಪಾಯಿ.
ಜನರಿಗೆ ಶುದ್ದ ಕುಡಿಯುವ ನೀರು ದೊರಕಿಸಲು ಆದ್ಯತೆ.
ವಿಮಾನ ನಿಲ್ದಾಣಗಳನ್ನು ಖಾಸಗೀಕರಣ ಮಾಡುವ ಮೂಲಕ ಅಗತ್ಯ ಬಂಡವಾಳ ಸಂಗ್ರಹ.
ಪಶ್ಚಿಮ ಬಂಗಾಳ 675 ಕಿ.ಮೀ. ಹೆದ್ದಾರಿ ನಿರ್ಮಾಣಕ್ಕೆ 25 ಸಾವಿರ ಕೋಟಿ ರೂಪಾಯಿ.
ಶುದ್ಧ ಗಾಳಿ ಯೋಜನೆಗೆ 2000 ಕೋಟಿ ರೂಪಾಯಿ.
2030 ರ ವೇಳೆಗೆ ನ್ಯಾಷನಲ್ ರೈಲ್ವೆ ಲೈನ್ ನಿರ್ಮಾಣ.
ಮೇಕ್ ಇನ್ ಇಂಡಿಯಾಗೆ ಒತ್ತುನೀಡಿ ನ್ಯಾಷನಲ್ ರೈಲ್ವೆ ಲೈನ್ ನಿರ್ಮಾಣ.
2023ರ ಡಿಸೆಂಬರ್ ವೇಳೆಗೆ ಬ್ರಾಡ್ ಗೇಜ್ ರೈಲ್ವೆ ವಿದ್ಯುದೀಕರಣ ಕಾರ್ಯ ಪೂರ್ಣ.
ಬೆಂಗಳೂರು ಮೆಟ್ರೋಗೆ 14,788 ಕೋಟಿ ರೂಪಾಯಿ.
ಸ್ವದೇಶಿ ನಿರ್ಮಿತ ಭದ್ರತಾ ವ್ಯವಸ್ಥೆಯ ಮೂಲಕ ರೈಲ್ವೆ ಅಪಘಾತ ತಡೆಯಲು ಸೂಕ್ತ ಕ್ರಮ.
2.8 ಕೋಟಿ ಮನೆಗಳಿಗೆ ಕಳೆದ ಆರು ವರ್ಷಗಳಿಂದ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ.
1000 ಹೊಸ ಗ್ಯಾಸ್ ಏಜೆನ್ಸಿಗಳಿಗೆ ಅವಕಾಶ.
ಗ್ರಾಹಕರು ಯಾರಿಂದ ಬೇಕಾದರೂ ವಿದ್ಯುತ್ ಖರೀದಿಸಲು ಅನುಮತಿ.
ಜಮ್ಮು-ಕಾಶ್ಮೀರದಲ್ಲಿ ಗ್ಯಾಸ್ ಪೈಪ್ ಲೈನ್ ಅಳವಡಿಕೆ.
ಸೌರಶಕ್ತಿ ವಲಯಕ್ಕೆ ಒಂದು ಸಾವಿರ ಕೋಟಿ ರೂಪಾಯಿ ಮೀಸಲು.
ವಿಮಾ ಕಂಪನಿಗಳಲ್ಲಿ ಎಫ್.ಡಿ.ಐ. ಶೇಕಡ 74ಕ್ಕೆ ಹೆಚ್ಚಳ.
ಸಾಮಾನ್ಯ ಜನರಿಗೆ ಸುಲಭವಾಗಿ ಸಾಲ ಸೌಲಭ್ಯ ಒದಗಿಸಲು ಆದ್ಯತೆ.
ಕೃಷಿ ಉತ್ಪನ್ನಗಳಿಗೆ ಎಂ.ಎಸ್.ಪಿ. ನೀಡಲು ಕೇಂದ್ರ ಸರ್ಕಾರದ ನಿರ್ಧಾರ.
ಭಾರತೀಯ ಜೀವವಿಮಾ ನಿಗಮದ ಷೇರುಗಳನ್ನು ಷೇರು ಮಾರುಕಟ್ಟೆಗೆ ಬಿಡುಗಡೆ ಮಾಡಲು ನಿರ್ಧಾರ.
ಧಾನ್ಯಗಳ ಖರೀದಿಗೆ 10500 ಕೋಟಿ ರೂಪಾಯಿ ಮೀಸಲು.
ಎಲ್ಲಾ ರಾಜ್ಯಗಳಿಗೂ ಸ್ವಾಮಿತ್ವ ಯೋಜನೆ ವಿಸ್ತರಣೆ.
ದೇಶದಾದ್ಯಂತ ನೂರು ಸೈನಿಕ ಶಾಲೆಗಳನ್ನು ಸ್ಥಾಪಿಸಲು ಕೇಂದ್ರದಿಂದ ಒತ್ತು.
ಅಸ್ಸಾಂ ಟೀ ಕಾರ್ಮಿಕರಿಗೆ ನೆರವಾಗಲು ಸಾವಿರ ಕೋಟಿ ರೂಪಾಯಿ ಮೀಸಲು.
2021 ರ ಡಿಸೆಂಬರ್ ನಲ್ಲಿ ಮಾನವರಹಿತ ಚಂದ್ರಯಾನ.
ಆರೋಗ್ಯ ಕಾರ್ಯಕರ್ತರಿಗಾಗಿ ಕೇಂದ್ರ ಸರ್ಕಾರದಿಂದ ಹೊಸ ಮಸೂದೆ.
ಡಿಜಿಟಲ್ ಪೇಮೆಂಟ್ ಮೋಡ್ ಉತ್ತೇಜನಕ್ಕೆ 1500 ಕೋಟಿ ರೂಪಾಯಿ.