ಮೋದಿ ಸರ್ಕಾರದ ಬಜೆಟನ್ನು ನಿರ್ಮಲಾ ಸೀತಾರಾಮನ್ ಇಂದು ಮಂಡನೆ ಮಾಡ್ತಿದ್ದಾರೆ. ಬಜೆಟ್ ಮಂಡನೆ ಮಾಡ್ತಿರುವ ದೇಶದ ಎರಡನೇ ಮಹಿಳೆ ನಿರ್ಮಲಾ ಸೀತಾರಾಮನ್ ಆಗಿದ್ದಾರೆ. ನಿರ್ಮಲಾ ಸೀತಾರಾಮನ್ ಈ ಹಿಂದೆ ಕೂಡಾ ಬಜೆಟ್ ಮಂಡಿಸಿದ್ದು, ಇದೀಗ ಕೊರೊನಾ ಸಂಕಷ್ಟದ ಬಳಿಕ ಮಂಡನೆ ಮಾಡುತ್ತಿರುವ ಮತ್ತೊಂದು ಬಜೆಟ್ ಸಾಕಷ್ಟು ಕುತೂಹಲ ಕೆರಳಿಸಿದೆ.
ನಿರ್ಮಲಾರಿಗಿಂತ ಮೊದಲು ಮಾಜಿ ಪ್ರಧಾನಿ ದಿವಂಗತ ಇಂದಿರಾ ಗಾಂಧಿ ಕೇಂದ್ರ ಬಜೆಟ್ ಮಂಡನೆ ಮಾಡಿದ್ದರು. ಸುಮಾರು 51 ವರ್ಷಗಳ ಹಿಂದೆ ಇಂದಿರಾ ಗಾಂಧಿ ಬಜೆಟ್ ಮಂಡನೆ ಮಾಡಿದ್ದರು.
‘ಆದಾಯ ತೆರಿಗೆ’ ಸಂಬಂಧಿತ ದಾಖಲೆಗಳನ್ನು ಎಷ್ಟು ವರ್ಷ ಇಟ್ಟುಕೊಳ್ಳಬೇಕು…? ಇಲ್ಲಿದೆ ಬಹು ಮುಖ್ಯ ಮಾಹಿತಿ
ಫೆಬ್ರವರಿ 28, 1970 ರಂದು ಪ್ರಧಾನ ಮಂತ್ರಿ ಹಾಗೂ ವಿತ್ತ ಮಂತ್ರಿಯಾಗಿದ್ದ ಇಂದಿರಾ ಗಾಂಧಿ ಬಜೆಟ್ ಮಂಡನೆ ಮಾಡಿದ್ದರು. ಮೊದಲ ಭಾಗದಲ್ಲಿ 17 ಅಂಕಗಳು ಮತ್ತು ಎರಡನೇ ಭಾಗದಲ್ಲಿ 38 ಅಂಕಗಳು ಇದ್ದವು. ಇಂದಿರಾ ಗಾಂಧಿ ತಮ್ಮ 15 ಪುಟಗಳ ಬಜೆಟ್ ಮಂಡಿಸಿದ್ದರು.