ನವದೆಹಲಿ: ಬಜೆಟ್ ನಲ್ಲಿ ತೆರಿಗೆ ಹೊರೆ ಇಳಿಕೆಯಾಗುವ ಸಾಧ್ಯತೆಯಿದೆ. ಕೊರೋನಾ ಸಂಕಷ್ಟದ ಹಿನ್ನೆಲೆಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ಮಂಡಿಸಲಿರುವ ಬಜೆಟ್ ನಲ್ಲಿ ವಾರ್ಷಿಕ 80 ಸಾವಿರ ರೂ. ರೂಪಾಯಿಯವರೆಗೂ ವಿನಾಯಕ ನೀಡುವ ಸಾಧ್ಯತೆ ಇದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ಹೇಳಿವೆ.
ಸ್ಟ್ಯಾಂಡರ್ಡ್ ಡಿಡೆಕ್ಷನ್ ಮಿತಿ ಹೆಚ್ಚಳ ಮಾಡಲು ಕಳೆದ ಬಜೆಟ್ನಲ್ಲಿ ಜಾರಿಗೆ ತರಲಾಗಿದ್ದ ತೆರಿಗೆ ವ್ಯವಸ್ಥೆಗಳನ್ನು ಬದಲಾವಣೆ ಮಾಡಬಹುದು ಎಂದು ಹೇಳಲಾಗಿದೆ.
ಪ್ರಸ್ತುತ 2.50 ಲಕ್ಷ ರೂ.ವರೆಗಿನ ವಾರ್ಷಿಕ ಆದಾಯ ಇರುವವರಿಗೆ ತೆರಿಗೆ ಇಲ್ಲ. 2.50 ಲಕ್ಷ ರೂ.ನಿಂದ 5 ಲಕ್ಷದವರೆಗೆ ಶೇಕಡ 5 ರಷ್ಟು ತೆರಿಗೆ ಇದೆ. 5 ಲಕ್ಷ ರೂ.ನಿಂದ 7.50 ಲಕ್ಷದವರೆಗೆ ಶೇಕಡ 10 ರಷ್ಟು, 7.50 ಲಕ್ಷ ರೂ.ನಿಂದ 10 ಲಕ್ಷದವರೆಗೆ ಶೇಕಡ 15 ರಷ್ಟು., 10 ಲಕ್ಷದಿಂದ 12.50 ಲಕ್ಷದವರೆಗೆ ಶೇಕಡ 20 ರಷ್ಟು ತೆರಿಗೆ ಇದೆ.