ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಡಿಸಿದ ಬಜೆಟ್ ನಲ್ಲಿ ಕೃಷಿ ಉತ್ಪನ್ನಗಳಿಗೆ ಸೀಮಾ ಸುಂಕ ವಿನಾಯಿತಿ ನೀಡಲಾಗಿದೆ.
ದೇಶದಲ್ಲಿ ಲಭ್ಯವಿರುವ ಕೃಷಿ ಉತ್ಪನ್ನ, ರಾಸಾಯನಿಕ, ವೈದ್ಯಕೀಯ ಉಪಕರಣ, ಔಷಧ ಸೇರಿದಂತೆ 350 ವಸ್ತುಗಳಿಗೆ ಸೀಮಾಸುಂಕ ವಿನಾಯಿತಿಯನ್ನು ಪ್ರಕಟಿಸಲಾಗಿದೆ. ಹಂತಹಂತವಾಗಿ ವಿನಾಯಿತಿಗಳನ್ನು ಜಾರಿಗೆ ತರಲಾಗುವುದು.
ಜವಳಿ, ರಾಸಾಯನಿಕ, ಲೋಹ ಕ್ಷೇತ್ರಗಳಲ್ಲಿ ಈ ಪರಿಶೀಲನೆ ನಡೆಯಲಿದೆ. ಭಾರತದಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಕಸ್ಟಮ್ಸ್ ಸುಂಕ ವಿನಾಯಿತಿ ನೀಡಿ ಕಚ್ಚಾ ಸಾಮಗ್ರಿಗಳ ಮೇಲೆ ರಿಯಾಯಿತಿ ಸುಂಕ ವಿಧಿಸಲಾಗಿದೆ.