ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬಜೆಟ್ ಮಂಡಿಸಲಿದ್ದಾರೆ. ಬಜೆಟ್ 2022 ರ ಘೋಷಣೆಗೆ ಮುಂಚಿತವಾಗಿ ಮಾರುಕಟ್ಟೆಯು ಉತ್ತಮ ಸ್ಥಿತಿಯಲ್ಲಿದೆ.
ಸೆನ್ಸೆಕ್ಸ್ 582.85 ಪಾಯಿಂಟ್‌ಗಳಿಗೆ ಏರಿದೆ. ಪ್ರಸ್ತುತ 58,597.02 ನಲ್ಲಿದೆ. ನಿಫ್ಟಿ ಕೂಡ 156.20 ಪಾಯಿಂಟ್‌ಗಳ ಏರಿಕೆ ಕಂಡು ಪ್ರಸ್ತುತ 17,496.05 ಕ್ಕೆ ಏರಿಕೆಯಾಗಿದೆ.
ಬಜೆಟ್ ಗೆ ಮೊದಲು ಅಂತರಾಷ್ಟ್ರೀಯ ಚಿನ್ನದ ಬೆಲೆ ಮಂಗಳವಾರವೂ ಸ್ಥಿರವಾಗಿದೆ. ಸ್ಪಾಟ್ ಚಿನ್ನವು ಪ್ರತಿ ಔನ್ಸ್‌ಗೆ 1,797.94 ಡಾಲರ್ ನಂತೆ ಸ್ವಲ್ಪ ಬದಲಾಗಿದೆ. ಯುಎಸ್ ಚಿನ್ನದ ದರ 1,799.10 ಡಾಲರ್ ನಲ್ಲಿ ಶೇಕಡ 0.2 ರಷ್ಟು ಹೆಚ್ಚಾಗಿದೆ.
ಸೆನ್ಸೆಕ್ಸ್ 582.85 ಪಾಯಿಂಟ್ ಗಳಲ್ಲಿ ಏರಿಕೆಯಾಗಿದ್ದು, ನಿಫ್ಟಿ 156.20 ಪಾಯಿಂಟ್ ಗಳ ಏರಿಕೆ ಕಂಡಿದೆ.