ಚಿನ್ನ, ಬೆಳ್ಳಿ ಮತ್ತು ಪ್ಲಾಟಿನಂಗಳಂಥ ಅಮೂಲ್ಯವಾದ ಲೋಹಗಳ ಮೇಲಿನ ಆಮದು ಸುಂಕವನ್ನು 7.5%ದಿಂದ 4%ಗೆ ಇಳಿಸಲು ಕೇಂದ್ರ ಸರ್ಕಾರವನ್ನು ರತ್ನಗಳು ಮತ್ತು ಆಭರಣ ರಫ್ತು ಉತ್ತೇಜನ ಮಂಡಳಿ (ಜಿಜೆಇಪಿಸಿ) ಆಗ್ರಹಿಸಿದೆ.
2022-23ರ ವಿತ್ತೀಯ ವರ್ಷದ ಬಜೆಟ್ ಮಂಡನೆಗೆ ತನ್ನದೊಂದು ಸಲಹೆಯನ್ನು ಜಿಜೆಇಪಿಸಿ ನೀಡಿದೆ. ಫೆಬ್ರವರಿ 1ರಂದು ಮುಂದಿನ ವಿತ್ತೀಯ ವರ್ಷದ ಬಜೆಟ್ ಮಂಡನೆಯಾಗಲಿದೆ.
ಪರ ಪುರುಷರ ಜೊತೆ ಸಂಬಂಧ ಬೆಳೆಸುವ ಚಟಕ್ಕೆ ಬಿದ್ದ ಪತ್ನಿ…!
ಇದೇ ವೇಳೆ ಪಾಲಿಶ್ ಮಾಡಲಾದ ವಜ್ರಗಳ ಮೇಲಿನ ಆಮದು ಸುಂಕವನ್ನು ಸಹ 7.5%ನಿಂದ 2.5%ಗೆ ಇಳಿಸಲು ಇದೇ ವೇಳೆ ಜಿಜೆಇಪಿಸಿ ಆಗ್ರಹಿಸಿದ್ದು, ಇದರೊಂದಿಗೆ ಮುಂಬಯಿಯ ’ವಿಶೇಷ ನೋಟಿಫೈಯ್ಡ್ ಪ್ರದೇಶದಲ್ಲಿ’ ವಜ್ರಗಳ ಮಾರಾಟಕ್ಕೆ ಅನುಮತಿಯನ್ನೂ ಕೋರಿದೆ. ಇದರೊಂದಿಗೆ ಒಟ್ಟಾರೆ ಕತ್ತರಿಸಿ ಪಾಲಿಶ್ ಮಾಡಲಾದ ವಜ್ರಗಳ ಪೈಕಿ 10%ನಷ್ಟನ್ನು ಶೂನ್ಯ ಸುಂಕದಲ್ಲಿ ಆಮದು ಮಾಡಿಕೊಳ್ಳಲು ರಫ್ತುದಾರರಿಗೆ ಅನುಮತಿ ಕೋರಿದೆ ಜಿಜೆಇಪಿಸಿ.
“ದೇಶದ ಸ್ವಾತಂತ್ರ‍್ಯೋತ್ಸವದ ಶತಮಾನೋತ್ಸವದ ವೇಳೆಗೆ $100 ಶತಕೋಟಿಯಷ್ಟು ರಫ್ತು ವಹಿವಾಟು ಮಾಡುವುದನ್ನು ನಾವು ಎದುರು ನೋಡುತ್ತಿದ್ದೇವೆ,” ಎಂದು ಜಿಜೆಇಪಿಸಿನ ಚೇರ್ಮನ್ ಕಾಲಿನ್ ಶಾ ತಿಳಿಸಿದ್ದಾರೆ.