ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಾಮಾನ್ಯ ಬಜೆಟ್ ಮಂಡಿಸಲಿದ್ದಾರೆ. ಬಜೆಟ್ ನಲ್ಲಿ ಮಧ್ಯಮ ವರ್ಗದವರಿಗೆ ನಿರ್ಮಲಾ ಸೀತಾರಾಮನ್ ನೆಮ್ಮದಿ ಸುದ್ದಿ ನೀಡುವ ಸಾಧ್ಯತೆಯಿದೆ. ತೆರಿಗೆದಾರರಿಗೆ ತೆರಿಗೆ ವಿನಾಯಿತಿಯಲ್ಲಿ ಖುಷಿ ಸುದ್ದಿ ಸಿಗಲಿದೆ ಎನ್ನಲಾಗ್ತಿದೆ.
ತೆರಿಗೆ ವಿನಾಯಿತಿ ಮಿತಿಯನ್ನು ಐದು ಲಕ್ಷಕ್ಕೆ ಏರಿಸುವ ಸಾಧ್ಯತೆಯಿದೆ. ಈ ಮಿತಿ ಸದ್ಯ 2.5 ಲಕ್ಷಕ್ಕಿದೆ. 2019ರ ಮಧ್ಯಂತರ ಬಜೆಟ್ ನಲ್ಲಿ ಎಲ್ಲಾ ತೆರಿಗೆಗಳಿಗೆ ವಿನಾಯಿತಿ ನೀಡುವುದಾಗಿ ಸರ್ಕಾರ ಹೇಳಿತ್ತು. ಕಳೆದ ವರ್ಷ ತೆರಿಗೆ ವಿನಾಯಿತಿಯಲ್ಲಿ ಬದಲಾವಣೆ ಮಾಡಿಲ್ಲ.
ವೈಯಕ್ತಿಕ ತೆರಿಗೆದಾರರಿಗೆ ಕೆಲ ವಿನಾಯಿತಿಯನ್ನು ನೀಡಿತ್ತು. ಹೊಸ ತೆರಿಗೆ ನೀತಿ ಹಾಗೂ ಹಳೆ ತೆರಿಗೆ ನೀತಿ ಎರಡನ್ನೂ ಜಾರಿಯಲ್ಲಿಟ್ಟಿತ್ತು. ಜನರು ತಮಗೆ ಬೇಕಾದ ತೆರಿಗೆ ನೀತಿಯನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಿತ್ತು. 2.5 ಲಕ್ಷ ರೂಪಾಯಿ ಆದಾಯದಾರರಿಗೆ ಯಾವುದೇ ತೆರಿಗೆಯಿಲ್ಲ. 2.5ರಿಂದ 5 ಲಕ್ಷ ಆದಾಯ ಹೊಂದಿರುವವರು ಹಳೆ ನೀತಿ ಪಾಲಿಸಿದ್ರೆ ಶೇಕಡಾ 5ರಷ್ಟು ಹಾಗೂ ಹೊಸ ತೆರಿಗೆ ಪಾವತಿಸಿದ್ರೆ ಶೇಕಡಾ 5ರಷ್ಟು ತೆರಿಗೆ ವಿಧಿಸಬೇಕಾಗಿತ್ತು. 5 ರಿಂದ 7.5 ಲಕ್ಷ ಆದಾಯದಾರರಿಗೆ ಈ ತೆರಿಗೆ ಬದಲಾಗಿತ್ತು. ಹಳೆ ನಿಯಮ ಅನುಸರಿಸುವವರ ಶೇಕಡಾ 20ರಷ್ಟು ಹೊಸ ನಿಯಮ ಪಾಲಿಸುವವರು ಶೇಕಡಾ 10ರಷ್ಟು ತೆರಿಗೆ ಪಾವತಿ ಮಾಡಬೇಕಾಗಿತ್ತು.