ನವದೆಹಲಿ: ಮೋದಿ ಸರ್ಕಾರ 2021 ರ ಬಜೆಟ್ ನಲ್ಲಿ ಹೊಸ ಸ್ಲ್ರ್ಯಾಪ್ ನೀತಿ ಜಾರಿಗೆ ತರುವ ನಿರೀಕ್ಷೆ ಇದೆ. ನೀತಿ ಜಾರಿಗೆ ಬಂದರೆ ವಾಹನ ಉದ್ಯಮದಲ್ಲಿ ಹೆಚ್ಚಿನ ಚೇತರಿಕೆ ಕಾಣಲಿದೆ. ಉದ್ಯೋಗವೂ ಹೆಚ್ಚಲಿದೆ.
ದೇಶದಲ್ಲಿ ವಿವಿಧ ಕಾರಣದಿಂದ ವಾಹನೋದ್ಯಮ ಸೊರಗುತ್ತಿದೆ. ಹಳೆಯ ವಾಹನಗಳು ಗುಜರಿ ಸೇರಿದರೆ ಹೊಸ ವಾಹನಗಳಿಗೆ ಬೇಡಿಕೆ ಬರಲಿದೆ ಎಂಬ ನಿರೀಕ್ಷೆ ಸರ್ಕಾರದ್ದು. ಈ ಹಿನ್ನೆಲೆಯಲ್ಲಿ ಹೊಸ ಸ್ಕ್ರ್ಯಾಪ್ ನೀತಿ ಜಾರಿಗೆ ತರುವುದಾಗಿ ಕೇಂದ್ರ ಸಾರಿಗೆ ಸಚಿವ ಕೆಲ ತಿಂಗಳ ಹಿಂದೆ ಹೇಳಿದ್ದರು.
10 ರಿಂದ 15 ವರ್ಷ ಹಳೆಯದಾದ ವಾಹನವನ್ನು ಫಿಟ್ ನೆಸ್ ಪರೀಕ್ಷೆ ಮಾಡಿ ಅನರ್ಹವಾದರೆ ಗುಜರಿಗೆ ಕಳಿಸುವ ಯೋಜನೆ ಇದಾಗಿದೆ.