ನವದೆಹಲಿ: 2021 ರ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ತೆರಿಗೆ ಪದ್ಧತಿಯಲ್ಲಿ ಭಾರಿ ಬದಲಾವಣೆ ತರಲು ಮುಂದಾಗಿದೆ. ಕೆಲ ವಿಭಾಗಗಳ ತೆರಿಗೆದಾರರಿಗೆ ಒಂದಿಷ್ಟು ವಿನಾಯಿತಿ ನೀಡಲು ಮೋದಿ ಸರ್ಕಾರ ತಯಾರಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಪ್ರವಾಸ ಯೋಜನೆ, ಆರೋಗ್ಯ ವಿಮೆ ಮತ್ತು ಗೃಹ ಸಾಲ ಮರು ಪಾವತಿ ಮೇಲಿನ ತೆರಿಗೆಯಲ್ಲಿ ವಿನಾಯಿತಿ ನೀಡುವ ಬಗ್ಗೆ ಕೇಂದ್ರ ಯೋಜಿಸಿದೆ ಎನ್ನಲಾಗಿದೆ.
ಇಎಂಐ ಮೂಲಕ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡ್ತೀರಾ…? ಹಾಗಾದ್ರೆ ಓದಿ ಈ ಸುದ್ದಿ
ವಾರ್ಷಿಕ 10 ಲಕ್ಷ ರೂ. ಒಳಗೆ ಆದಾಯ ಹೊಂದಿರುವವರಿಗೆ ಶೇ.10 ರಷ್ಟು, 10 ಲಕ್ಷದಿಂದ 20 ಲಕ್ಷದವರೆಗೆ ಶೆ. 20 ರಷ್ಟು ಹಾಗೂ 30 ಲಕ್ಷದಿಂದ 2 ಕೋಟಿವರೆಗೆ ಶೇ. 30 ರಷ್ಟು. 2 ಕೋಟಿ ಮೇಲಿನವರಿಗೆ ಶೇ. 35 ರಷ್ಟು ಆದಾಯ ತೆರಿಗೆ ಸ್ಥರಗಳನ್ನು ನಿಗದಿ ಮಾಡಲು ನೇರ ತೆರಿಗೆ ಟಾಸ್ಕ್ ಫೋರ್ಸ್ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಇದುವರೆಗೆ 10 ಹಾಗೂ 30 ಎರಡೇ ಸ್ಥರಗಳಿದ್ದವು.