ರೈಲ್ವೇ ಬಜೆಟ್ ಅನ್ನು ಸಾಮಾನ್ಯ ಬಜೆಟ್ ಜೊತೆಗೆ ವಿಲೀನ ಮಾಡುವ ಮೂಲಕ 92 ವರ್ಷಗಳ ಸಂಪ್ರದಾಯವೊಂದಕ್ಕೆ ನರೇಂದ್ರ ಮೋದಿ ಸರ್ಕಾರವು 2016ರಲ್ಲಿ ಬ್ರೇಕ್ ಹಾಕಿತ್ತು.
1924ರಲ್ಲಿ ಬ್ರಿಟಿಷ್ ರಾಜ್ ಇದ್ದ ವೇಳೆ ಪ್ರತ್ಯೇಕ ರೈಲ್ವೇ ಬಜೆಟ್ ಅನ್ನು ಹೊಂದಲಾಗಿತ್ತು. ವಿಲೀನದ ಬಳಿಕವೂ ಸಹ ರೈಲ್ವೇ ಇಲಾಖೆಗೆ ಕೊಡಲಾಗಿರುವ ಕಾರ್ಯ ಸ್ವಾಯತ್ತತೆಯನ್ನು ಹಾಗೇ ಉಳಿಸಿಕೊಳ್ಳಲಾಗಿದೆ.
ರೈಲ್ವೇ ಇಲಾಖೆಯು ಕೇಂದ್ರ ಸರ್ಕಾರಕ್ಕೆ ತನ್ನ ಪಾಲಿನ ಕೊಡುಗೆಯನ್ನು ನೀಡುವ ಅಗತ್ಯವಿಲ್ಲದೇ ಇದ್ದರೂ ಸಹ ಸಾರ್ವಜನಿಕ ಬೊಕ್ಕಸದಿಂದ ಆರ್ಥಿಕ ನೆರವನ್ನು ಪಡೆದುಕೊಳ್ಳಬಹುದಾಗಿದೆ. ರೈಲ್ವೇ ಇಲಾಖೆಯ ನೌಕರರ ವೇತನ ಹಾಗೂ ಪಿಂಚಣಿಗಳನ್ನು ಭರಿಸುವ ವಿತ್ತೀಯ ಹೊಣೆಗಾರಿಕೆ ರೈಲ್ವೇ ಮೇಲೆ ಇದೆ.
‘ಜನ ಶತಾಬ್ದಿ’ ಪ್ರಯಾಣಿಕರಿಗೆ ಮತ್ತೊಂದು ಗುಡ್ ನ್ಯೂಸ್
ಚುನಾವಣಾ ವರ್ಷದಲ್ಲಿ ಮಂಡನೆ ಮಾಡುತ್ತಿದ್ದ ರೈಲ್ವೇ ಬಜೆಟ್ ವೇಳೆ ಪ್ರಭಾವಿ ರಾಜಕಾರಣಿಗಳು ತಂತಮ್ಮ ಕ್ಷೇತ್ರಗಳಿಗೆ ಅವಾಸ್ತವಿಕವಾಗಿಯಾದರೂ ಹೆಚ್ಚು ರೈಲುಗಳನ್ನು ಘೋಷಣೆ ಮಾಡಿಸುತ್ತಿದ್ದ ಪರಿಪಾಠಕ್ಕೆ ಈ ಮೂಲಕ ಬ್ರೇಕ್ ಬಿದ್ದಿದೆ.
ಬಿಜೆಪಿಯ ದಿವಂಗತ ನಾಯಕ ಅರುಣ್ ಜೇಟ್ಲಿ ಹಣಕಾಸು ಇಲಾಖೆಯ ಚುಕ್ಕಾಣಿ ಹಿಡಿದಿದ್ದ ವೇಳೆ 2017-18ರಲ್ಲಿ ಮೊದಲ ಬಾರಿಗೆ ಸಮಗ್ರ ಬಜೆಟ್ ಅನ್ನು ಮುಂದಿಟ್ಟಿದ್ದರು. ಇದೇ ವೇಳೆ, ಫೆಬ್ರವರಿ ಅಂತ್ಯಕ್ಕೆ ಮಂಡನೆಯಾಗುತ್ತಿದ್ದ ಬಜೆಟ್ ಅನ್ನು ತಿಂಗಳ ಮೊದಲ ಕೆಲಸದ ದಿನವೇ ಘೋಷಣೆ ಮಾಡುವ ಮಹತ್ವದ ಹೆಜ್ಜೆಯನ್ನು ಇದೇ ವರ್ಷ ಇಡಲಾಗಿತ್ತು.
ಸಾಲ ಮನ್ನಾ: ರೈತರಿಗೆ ಮೋದಿ ಸರ್ಕಾರದಿಂದ ಭರ್ಜರಿ ಗಿಫ್ಟ್ ಸಾಧ್ಯತೆ
ಈ ಮೂಲಕ ಹಿಂದಿನ ವಿತ್ತೀಯ ವರ್ಷದ ಬಜೆಟ್ ಸಂಬಂಧಿ ಪ್ರಕ್ರಿಯೆಗಳೆಲ್ಲಾ ಮಾರ್ಚ್ 31ರ ವೇಳೆಗೆ ಅಂತ್ಯವಾಗಿ ಏಪ್ರಿಲ್ 1ರಿಂದ ಸಾರ್ವಜನಿಕ ಯೋಜನೆಗಳಿಗೆ ಹಣಕಾಸು ಬಿಡುಗಡೆ ಮಾಡಲು ಅನುವಾಗಿದೆ.
ಇದೇ ವೇಳೆ ಯೋಜನೆ/ಯೋಜನೇತರ ವೆಚ್ಚಗಳ ಬದಲಿಗೆ ’ಬಂಡವಾಳ ಹಾಗೂ ಸಲ್ಲಿಕೆಯಾದ ಹಣ’ದ ಮಾದರಿಯಲ್ಲಿ ವೆಚ್ಚಗಳ ವರ್ಗೀಕರಣವನ್ನು ಅನುಷ್ಠಾನಕ್ಕೆ ತರಲಾಯಿತು.