ಬಿಎಸ್ಎನ್ಎಲ್ ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಅಗ್ಗದ ರೀಚಾರ್ಜ್ ಯೋಜನೆಯನ್ನು ಬಿಡುಗಡೆ ಮಾಡಿದೆ. ಒಂದು ವರ್ಷದ ಮಾನ್ಯತೆಯೊಂದಿಗೆ ಈ ಪ್ಲಾನ್ ಗ್ರಾಹಕರಿಗೆ ಸಿಗಲಿದೆ. ಈ ಯೋಜನೆಯ ಬೆಲೆ 365 ರೂಪಾಯಿ. ಒಂದು ವರ್ಷದ ಮಾನ್ಯತೆ ಹೊಂದಿರುವ ಕಾರಣ ದಿನಕ್ಕೆ ಒಂದು ರೂಪಾಯಿ ಖರ್ಚು ಬರುತ್ತದೆ.
ಬಿಎಸ್‌ಎನ್‌ಎಲ್‌ನ ಈ ಯೋಜನೆಯಡಿ ಬಳಕೆದಾರರಿಗೆ ಅನಿಯಮಿತ ಧ್ವನಿ ಕರೆ ಸೌಲಭ್ಯ ಸಿಗ್ತಿದೆ. ಪ್ರತಿದಿನ 2 ಜಿಬಿ ಡೇಟಾ ಕೂಡ ಸಿಗಲಿದೆ. ಮೊದಲ 60 ದಿನಗಳಲ್ಲಿ 250 ನಿಮಿಷಗಳ ದೈನಂದಿನ ಧ್ವನಿ ಕರೆ ಉಚಿತವಾಗಿರುತ್ತದೆ. ಪ್ರತಿದಿನ 250 ನಿಮಿಷಗಳು ಮುಗಿದ ನಂತರ ಶುಲ್ಕ ಪಾವತಿಸಬೇಕಾಗುತ್ತದೆ. ಇದ್ರಲ್ಲಿ ಪ್ರತಿ ದಿನ 100 ಎಸ್ ಎಂ ಎಸ್ ಸಿಗಲಿದೆ.
ಕರ್ನಾಟಕ, ಆಂಧ್ರಪ್ರದೇಶ, ಅಸ್ಸಾಂ, ಬಿಹಾರ, ಜಾರ್ಖಂಡ್, ಗುಜರಾತ್, ಹರಿಯಾಣ, ಹಿಮಾಚಲ ಪ್ರದೇಶ, ಕೇರಳ, ಕೋಲ್ಕತಾ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮಧ್ಯಪ್ರದೇಶ, ಛತ್ತೀಸ್‌ಗಡ, ಒಡಿಶಾ, ಪಂಜಾಬ್, ರಾಜಸ್ಥಾನ, ಯುಪಿ ಪೂರ್ವ ಮತ್ತು ಯುಪಿ ಪಶ್ಚಿಮದಲ್ಲಿ ಬಿಎಸ್ಎನ್ಎಲ್ ಈ ಯೋಜನೆ ನೀಡ್ತಿದೆ. ಕೆಲ ದಿನಗಳ ಹಿಂದೆ ಬಿಎಸ್ಎನ್ಎಲ್ ಘರ್ ವಾಪಸಿ ಪ್ಲಾನ್ ಶುರು ಮಾಡಿದೆ. ಇದ್ರ ಬೆಲೆ399 ರೂಪಾಯಿ. ಪ್ರತಿ ತಿಂಗಳು 70 ಜಿಬಿ ಡೇಟಾ ಸಿಗಲಿದೆ.