ಬಿಎಸ್ಎನ್ಎಲ್ ಬಳಕೆದಾರರಿಗೆ ಖುಷಿ ಸುದ್ದಿಯೊಂದಿದೆ. ಕಂಪನಿಯು ತನ್ನ 600 ರೂಪಾಯಿ ಬ್ರಾಡ್‌ಬ್ಯಾಂಡ್ ಯೋಜನೆಯ ಲಭ್ಯತೆಯನ್ನು ಅಕ್ಟೋಬರ್ 27 ರವರೆಗೆ ವಿಸ್ತರಿಸಿದೆ. ಭಾರತ್ ಫೈಬರ್ 300 ಜಿಬಿ ಸಿಯುಎಲ್ ಸಿಎಸ್ 346 ಯೋಜನೆಯಲ್ಲಿ ಕಂಪನಿಯು 300 ಜಿಬಿ ಡೇಟಾವನ್ನು ನೀಡುತ್ತದೆ.
ಈ ಯೋಜನೆಯನ್ನು ಜುಲೈ 27 ರಂದು ಮುಕ್ತಾಯಗೊಳ್ಳಬೇಕಿತ್ತು. ಆದರೆ ಬಳಕೆದಾರ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಇದನ್ನು ಅಕ್ಟೋಬರ್ 27 ರವರೆಗೆ ವಿಸ್ತರಿಸಲು ನಿರ್ಧರಿಸಿದೆ. 600 ರೂಪಾಯಿ ಪಾರ್ಟ್ ಫೈಬರ್ ಯೋಜನೆಯನ್ನು ನವೀಕರಿಸಿರುವುದಾಗಿ ಕಂಪನಿ ವೆಬ್ಸೈಟ್ ನಲ್ಲಿ ಹೇಳಿದೆ.
ಯೋಜನೆಯಲ್ಲಿ ಒಟ್ಟು 300 ಜಿಬಿ ಡೇಟಾವನ್ನು ನೀಡಲಾಗುತ್ತಿದೆ. ಡೇಟಾ ಮಿತಿ ಮುಗಿದ ನಂತರ, ಯೋಜನೆಯಲ್ಲಿ ಲಭ್ಯವಿರುವ ಇಂಟರ್ನೆಟ್ ವೇಗವನ್ನು 2ಎಂಬಿಪಿಎಸ್ ಗೆ ಇಳಿಸಲಾಗುತ್ತದೆ.