ಬಿಎಸ್‌ಎನ್‌ಎಲ್ 300 ಜಿಬಿ ಪ್ಲಾನ್ ಸಿಎಸ್ 337 ಯೋಜನೆಯನ್ನು ಸೆಪ್ಟೆಂಬರ್ ವರೆಗೆ ವಿಸ್ತರಿಸಿದೆ. ಯೋಜನೆಯಡಿಯಲ್ಲಿ ಗ್ರಾಹಕರು 40ಎಂಬಿಪಿಎಸ್ ವೇಗದಲ್ಲಿ 300ಜಿಬಿ ಡೇಟಾವನ್ನು ಪಡೆಯುತ್ತಾರೆ. ಕಂಪನಿಯು ತನ್ನ 499 ರೂಪಾಯಿ ಬ್ರಾಡ್‌ಬ್ಯಾಂಡ್ ಯೋಜನೆಯ ಲಭ್ಯತೆಯನ್ನು ಸೆಪ್ಟೆಂಬರ್ 9, 2020 ರವರೆಗೆ ವಿಸ್ತರಿಸಿದೆ. ಈ ಯೋಜನೆ ಜೂನ್ 10 ರಂದು ಮುಕ್ತಾಯಗೊಳ್ಳಬೇಕಿತ್ತು.
ಬಿಎಸ್‌ಎನ್‌ಎಲ್‌ನ 300 ಜಿಬಿ ಪ್ಲಾನ್ ಸಿಎಸ್ 337 ಯೋಜನೆಯು 300 ಜಿಬಿ ಡೇಟಾ ಮಿತಿಯವರೆಗೆ 40 ಎಮ್‌ಬಿಪಿಎಸ್ ವೇಗವನ್ನು ನೀಡುತ್ತದೆ. ಮಿತಿ ಮುಗಿದ ನಂತರ ಈ ವೇಗವು 1ಎಂಬಿಪಿಎಸ್ ಆಗಲಿದೆ. ಕಂಪನಿಯ ಯೋಜನೆ ಕೋಲ್ಕತಾ, ಸಿಕ್ಕಿಂ ಮತ್ತು ಪಶ್ಚಿಮ ಬಂಗಾಳ ವಲಯಗಳಲ್ಲಿ ಲಭ್ಯವಿದೆ.
ಯೋಜನೆಯ ಮತ್ತೊಂದು ವಿಶೇಷ ಸಂಗತಿಯೆಂದರೆ ದೇಶಾದ್ಯಂತದ ಯಾವುದೇ ನೆಟ್‌ವರ್ಕ್‌ಗೆ ಅನಿಯಮಿತ ಕರೆ ನೀಡಲಾಗುತ್ತದೆ. 499 ರೂಪಾಯಿಗಳ ಸ್ಟ್ಯಾಂಡರ್ಡ್ ಪ್ಲಾನ್‌ನಲ್ಲಿ 100 ಜಿಬಿ ಡೇಟಾವನ್ನು 20 ಎಮ್‌ಬಿಪಿಎಸ್ ವೇಗದಲ್ಲಿ ನೀಡಲಾಗುತ್ತಿದೆ. ಕಂಪನಿಯ ಈ ಯೋಜನೆ ಪ್ರಸ್ತುತ ಜೂನ್ 29 ರವರೆಗೆ ಲಭ್ಯವಿದೆ.